ನವದೆಹಲಿ:ಪಂಚತಾರಾ ಹೋಟೆಲೊಂದರಲ್ಲಿ 15 ವರ್ಷದ ಬಾಲಕನಿಂದ ಅತ್ಯಾಚಾರ ನಡೆದಿದ್ದು, ಆತನ ತಂದೆ ಹಣದ ಆಮಿಷವೊಡ್ಡಿ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದು ಬಹಿರಂಗಗೊಂಡಿದೆ.
ಡೆಹ್ರಾಡೂನ್​ನ ಪಂಚತಾರಾ ಹೋಟೆಲೊಂದರಲ್ಲಿ ಆರೋಪಿ ಬಾಲಕ ತನ್ನ ತಂದೆ ತಾಯಿಯೊಂದಿಗೆ ತಂಗಿದ್ದ. ಈತ ಹೋಟೆಲ್​ನ ಹೌಸ್​ಕೀಪಿಂಗ್​ನಲ್ಲಿದ್ದ 24 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಶುಕ್ರವಾರ ವಾಷ್​ರೂಮ್​ನಲ್ಲಿ ಈ ಮಹಿಳೆ ಮೊಬೈಲ್​ಫೋನ್​ ಚಾರ್ಜ್​ಗೆ ಹಾಕಿಕೊಂಡಿದ್ದಳು. ಆಗ ಅಲ್ಲಿಗೆ ಪ್ರವೇಶಿಸಿದ್ದ ಬಾಲಕ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತ ಬಾಗಿಲು ಹಾಕಿಕೊಂಡು ಒಳಗಿನಿಂದ ಚಿಲಕ ಹಾಕಿಕೊಂಡಿದ್ದರಿಂದ ಈಕೆ ಕೂಗಿಗೊಂಡಿದ್ದರೂ ಹೊರಗೆ ಕೇಳಿಸಿರಲಿಲ್ಲ.
ಬಳಿಕ ಪ್ರಕರಣ ಗೊತ್ತಾಗಿದ್ದು, ಬಾಲಕನ ತಂದೆ ಹಣದ ಆಮಿಷವೊಡ್ಡಿ ದೂರು ನೀಡದಂತೆ ಮಹಿಳೆಯಲ್ಲಿ ವಿನಂತಿ ಮಾಡಿಕೊಂಡಿದ್ದ. ಅದಾಗ್ಯೂ ಮಣಿಯದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕನನ್ನು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಪತಿಗೆ ‘ಬ್ಯಾಡ್​ ನ್ಯೂಸ್​’ ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

ವಿವಾದಕ್ಕೆ ಸಂಬಂಧಿಸಿದಂತೆ ಮೌನ ಮುರಿದ ನಟಿ ಸಾಯಿಪಲ್ಲವಿ, ವಿಡಿಯೋ ಮೂಲಕ ಸ್ಪಷ್ಟೀಕರಣ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 2 =
Remember me
