ಜಲಂಧರ್​:ಬೈಕ್​ನಲ್ಲಿ ಬಂದ ಮೊಬೈಲ್​ ದೋಚುವ ಖದೀಮರಿಬ್ಬರು ಹುಡುಗಿಯೊಬ್ಬಳ ಮೊಬೈಲ್​ ಕಸಿದು ಪರಾರಿಯಾಗಲು ಯತ್ನಿಸಿದಾಗ ತನ್ನ ದಿಟ್ಟತನ ಪ್ರದರ್ಶಿಸಿದ ಹುಡುಗಿ, ಅವರೊಂದಿಗೆ ಕಾದಾಟಕ್ಕಿಳಿದು ಹರಿತ ಆಯುಧವನ್ನು ಲೆಕ್ಕಿಸದೇ ಇಬ್ಬರಲ್ಲಿ ಓರ್ವ ಖದೀಮನನ್ನ ಸೆರೆಹಿಡಿದ ರೋಚಕ ಘಟನೆ ಪಂಜಾಬ್​​ನ ಜಲಂಧರ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಕುಸುಮ ಕುಮಾರಿ (15) ದಿಟ್ಟ ಹುಡುಗಿ. ಫತೇಹ್​ಪುರಿ ಮೊಹಲ್ಲಾ ನಿವಾಸಿಯಾದ ಕುಸುಮ ಕೈಯಲ್ಲಿ ಮೊಬೈಲ್​ ಹಿಡಿದುಕೊಂಡು ಮನೆಗೆ ತೆರಳುವಾಗ ರೋಚಕ ಘಟನೆ ನಡೆದಿದೆ.
ಇದನ್ನೂ ಓದಿ:ಆಕಾಶದಿಂದ ‘ಹಣದ ಮಳೆ’ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು…!
ಹಿಂದಿನಿಂದ ಬೈಕ್​ನಲ್ಲಿ ಬಂದ ಖದೀಮರು ಹುಡುಗಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸುತ್ತಾರೆ. ಖದೀಮರಿಗೆ ಹೆದರದ ಹುಡುಗಿ ಹಿಂಬದಿ ಕುಳಿತಿದ್ದ ಹಾಗೂ ಮೊಬೈಲ್​ ಕಸಿದವನ ಟೀ-ಶರ್ಟ್​ ಹಿಡಿದೆಳೆಯುತ್ತಾಳೆ. ಬೈಕ್​ನಿಂದ ಕೆಳಗಿಳಿಯುವ ಖದೀಮ ಹುಡುಗಿಯ ಮೇಲೆ ಹರಿತ ಆಯುಧದಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಮತ್ತೊಮ್ಮೆ ಬೈಕ್​ ಏರಲು ಓಡುತ್ತಾನೆ. ಆದರೆ ಛಲ ಬಿಡದ ಹುಡುಗಿ ಖದೀಮನೊಂದಿಗೆ ಕಾದಾಡುತ್ತಾಳೆ. ಆತ ಮತ್ತೆ ಆಯುಧದಿಂದ ನಾಲ್ಕೈದು ಬಾರಿ ಹಲ್ಲೆ ಮಾಡುತ್ತಾನೆ. ಆದ್ರೆ ಹುಡುಗಿ ಮಾತ್ರ ಜಪ್ಪಯ್ಯ ಅಂದ್ರು ಟೀಶರ್ಟ್​ ಬಿಡುವುದಿಲ್ಲ. ಅಷ್ಟರಲ್ಲಾಗಲೇ ನೆರೆಯವರು ಘಟನೆಯನ್ನು ನೋಡಿ ಓಡಿ ಬರುತ್ತಾರೆ. ಆವಾಗ ಬೈಕ್​ನಲ್ಲಿದ್ದ ಖದೀಮ ಅಲ್ಲಿಂದ ಪರಾರಿಯಾಗುತ್ತಾನೆ. ಇನ್ನೊಬ್ಬ ಆರೋಪಿಯನ್ನು ಹಿಡಿದುಕೊಳ್ಳುತ್ತಾರೆ ಮತ್ತು ಹುಡುಗಿ ತನ್ನ ಮೊಬೈಲ್​ ಅನ್ನು ಮರಳಿ ಪಡೆಯುತ್ತಾಳೆ.
ಈ ಎಲ್ಲ ರೋಚಕ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, 1.28 ನಿಮಿಷದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಹುಡುಗಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಇದನ್ನೂ ಓದಿ:ಅನಾಥ ಸಹೋದರಿಯರಿಗೆ ಹಿಂದು ಸಂಪ್ರದಾಯದಂತೆ ಮದ್ವೆ: ಸುದ್ದಿ ಸುಳ್ಳಾದ್ರೂ ನಂಬಿಕೆಗಿಲ್ಲ ದ್ರೋಹ!
ಇನ್ನು ಘಟನೆಯ ಬಳಿಕ ಹಲ್ಲೆಯಿಂದ ಗಾಯಗೊಂಡಿದ್ದ ಹುಡುಗಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಸೆರೆಯಾದ ಆರೋಪಿಯನ್ನು ಅವಿನಾಶ್​ ಕುಮಾರ್​ (22) ಅಲಿಯಾಸ್​ ಅಶು ಎಂದು ಗುರುತಿಸಲಾಗಿದೆ. ಈತ ಬಸ್ತಿ ಡ್ಯಾನಿಶ್​ಮಂಡದ ಬೇಗುಂಪುರದ ನಿವಾಸಿ. ಇನ್ನು ಅವಿನಾಶ್​ ಜತೆ ಬಂದಿದ್ದ ಆರೋಪಿ ಪರಾರಿಯಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಾರಿಯಾದವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
https://www.youtube.com/watch?v=uBzz31CwtyY
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
