ಮೊದಲೊಂದು ಕಾಲದಲ್ಲಿ ತುಂಬ ಫೇಮಸ್ ಆಗಿದ್ದ ಡಬಲ್​ ಡೆಕ್ಕರ್​ ಬಸ್​ಗಳು ಈಗೀಗ ಎಲ್ಲ ನಗರಗಳಲ್ಲೂ ಬಹುತೇಕ ಕಣ್ಮರೆಯಾಗಿವೆ. ಮುಂಬೈನಲ್ಲಿ ಅಲ್ಲೊಂದು ಇಲ್ಲೊಂದು ಹಳೇ ಡಬಲ್​ ಡೆಕ್ಕರ್ ಬಸ್​ಗಳು ಕಾಣಿಸುತ್ತವೆ ಬಿಟ್ಟರೆ ಮತ್ಯಾವ ನಗರಗಳಲ್ಲೂ ಚಲಿಸುತ್ತಿರಲಿಲ್ಲ.
ಆದರೆ ಈಗ ಕೋಲ್ಕತ್ತ ರಸ್ತೆಗಳಲ್ಲಿ 15ವರ್ಷಗಳ ನಂತರ ಡಬಲ್​ ಡೆಕ್ಕರ್​ ಬಸ್​ಗಳು ಕಾಣಿಸಿಕೊಳ್ಳುತ್ತಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಂದು ಎರಡು ಆಧುನಿಕ ಡಬಲ್​ಡೆಕ್ಕರ್​ ಬಸ್​ಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಆದರೆ ಈ ಬಸ್​ಗಳು ಪ್ರತಿದಿನ ಸಂಚಾರ ಮಾಡುವುದಿಲ್ಲ. ಸದ್ಯ ದುರ್ಗಾಪೂಜಾ ನಿಮಿತ್ತ ಬಸ್​​ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಅದು ಮುಗಿದ ಬಳಿಕ ನಗರದ ಪ್ರವಾಸೋದ್ಯಮಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ನೀಲಿ ಮತ್ತು ಬಿಳಿ ಮಿಶ್ರಿತ ಪೇಂಟಿಂಗ್ ಉಳ್ಳ ಹೊಸ ಬಸ್​​ಗೆ ಒಂದೇ ಬಾಗಿಲು ಇದ್ದು, ಅದರಲ್ಲೇ ಪ್ರವೇಶ ಮತ್ತು ನಿರ್ಗಮನ ಮಾಡಬೇಕು. ಒಟ್ಟು 51 ಸೀಟ್​ಗಳಿದ್ದು, ಅದರಲ್ಲಿ 16 ಮೇಲಿನ ಸೀಟ್​ಗಳು. ಇನ್ನೊಂದು ವಿಶೇಷತೆಯೆಂದರೆ ಮೇಲಿನ ಡೆಕ್​​ಗೆ ಮೇಲ್ಛಾವಣಿ ಇಲ್ಲ. ತೆರೆದುಕೊಂಡೇ ಇದೆ. ಸಿಸಿಟಿವಿ ವ್ಯವಸ್ಥೆಯೂ ಇದೆ.
ಡಬಲ್​ ಡೆಕ್ಕರ್​ ಬಸ್​ಗಳು ಅತಿಯಾದ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂಬ ಕಾರಣಕ್ಕೆ ಅವುಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕೋಲ್ಕತ್ತದಲ್ಲಿ 2005ರಲ್ಲಿಯೇ ನಿಷೇಧ ಮಾಡಲಾಗಿತ್ತು. ಅದಾದ ಬಳಿಕ ಡಬಲ್​ ಡೆಕ್ಕರ್​ ಬಸ್​ಗಳ ಸಂಚಾರ ಇರಲಿಲ್ಲ. ಇದೀಗ ಮತ್ತೆರಡು ಹೊಸ, ಆಧುನಿಕ ಬಸ್​ಗಳು ರಾಜ್ಯಕ್ಕೆ ಕಾಲಿಟ್ಟಿವೆ. (ಏಜೆನ್ಸೀಸ್​)

ಸೆಗಣಿಯಿಂದ ತಯಾರಾದ ಮೊಬೈಲ್ ಚಿಪ್​ ಬಿಡುಗಡೆ: ವಿಕಿರಣ ತಡೆಯುವಲ್ಲಿ ವಿಶೇಷವಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
