ಕಾಬುಲ್:ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಕೈಜೋಡಿಸಿರುವ ಭಾರತೀಯರಿಗಾಗಲಿ, ತನ್ನ ನೆಲದಲ್ಲಿರುವ ವಿದೇಶಿಗರಿಗಾಗಲಿ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಹೇಳಿದ್ದ ತಾಲಿಬಾನಿಗಳು ಶನಿವಾರ 150 ಭಾರತೀಯರನ್ನು ವಿಚಾರಣೆಗೆ ಗುರಿಪಡಿಸಿದ್ದರಿಂದಾಗಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ವಣವಾಗಿತ್ತು. ಆದರೆ ವಿಚಾರಣೆ ಮುಗಿದ ಬಳಿಕ ಕಾಬುಲ್ ವಿಮಾನ ನಿಲ್ದಾಣಕ್ಕೆ ತಂದು ಬಿಟ್ಟಿದ್ದರಿಂದಾಗಿ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ. ಅಫ್ಘನ್​ನಲ್ಲಿ ಸಿಲುಕಿದ್ದ 85 ಮಂದಿಯನ್ನು ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ (ಸಿ-130ಜೆ) ತಜಕಿಸ್ತಾನದ ದುಶಾಂಬೆಗೆ ಸ್ಥಳಾಂತರಿಸಲಾಗಿದೆ. ಉಳಿದವರನ್ನು ಇನ್ನೊಂದು ವಿಮಾನದಲ್ಲಿ ಕರೆತರುವ ಪ್ರಯತ್ನ ಜಾರಿಯಲ್ಲಿದೆ. ಇದಕ್ಕೂ ಮೊದಲು, ಕಾಬುಲ್ ವಿಮಾನ ನಿಲ್ದಾಣದಲ್ಲಿ ಸ್ವದೇಶಕ್ಕೆ ಬರಲು ಕಾಯುತ್ತಿದ್ದ ಭಾರತೀಯರನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿ ಆಗಿತ್ತು.
ಆದರೆ ಇದನ್ನು ಅಲ್ಲಗಳೆದ ತಾಲಿಬಾನಿಗಳು, ಸಮೀಪದ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾರೆ. ಭಾರತೀಯರ ಪ್ರಯಾಣದ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಅವರನ್ನು ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ತಂದು ಬಿಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಕೂಡ ಸ್ಪಷ್ಟಪಡಿಸಿದೆ.
ಇನ್ನೂ ಇದ್ದಾರೆ:ಅಫ್ಘನ್​ನಲ್ಲಿ ಸಾವಿರಕ್ಕೂ ಹೆಚ್ಚು ಭಾರತೀಯರು ಇದ್ದಾರೆನ್ನಲಾಗಿದೆ. ಕಾಬುಲ್​ನಲ್ಲಿರುವ ಗುರುದ್ವಾರವೊಂದರಲ್ಲೇ ಸುಮಾರು 200 ಮಂದಿ ಇದ್ದಾರೆ. ಇಲ್ಲಿರುವ ಸಿಖ್ಖರು ಮತ್ತು ಹಿಂದುಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ತಾಲಿಬಾನಿಗಳು ಗುರುದ್ವಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಬುಧವಾರ ಪೋಸ್ಟ್ ಮಾಡಿದ್ದರು. ತನ್ನ ನಾಗರಿಕರ ಸುರಕ್ಷತೆ ಬಗ್ಗೆ ಭಾರತ ಸರ್ಕಾರ ಅತಂಕ ಪಡುವುದು ಬೇಡ.
ಭಾರತೀಯರನ್ನು ತುರ್ತಾಗಿ ಸ್ಥಳಾಂತರಿಸುವುದೂ ಅನಗತ್ಯ ಎಂದು ತಾಲಿಬಾನಿಗಳ ರಾಜಕೀಯ ಕಚೇರಿ ದೆಹಲಿಗೆ ಸಂದೇಶವೊಂದನ್ನು ಕಳುಹಿಸಿತ್ತು. ಈ ಸಂದೇಶ ರವಾನೆ ಆಗುವುದಕ್ಕೂ ಒಂದು ದಿನ ಮೊದಲು ಭಾರತದ ಎರಡು ಕಾನ್ಸುಲೆಟ್ ಕಚೇರಿಗೆ ನುಗ್ಗಿದ್ದ ತಾಲಿಬಾನಿಗಳು, ಅಲ್ಲಿ ದಾಂಧಲೆ ನಡೆಸಿ ದಾಖಲೆಗಳು ಮತ್ತು ವಾಹನಗಳನ್ನು ಒಯ್ದಿದ್ದರು.
ಹಿಂದುಗಳ ಮೇಲೆ ಹಲ್ಲೆ?:ಕಾಬುಲ್​ನ ವಿಮಾನ ನಿಲ್ದಾಣದಲ್ಲಿ ಸಿಖ್ಖರು ಮತ್ತು ಹಿಂದುಗಳ ಮೇಲೆ ಐಎಸ್​ಐ ಸೂಚನೆ ಮೇರೆಗೆ ತಾಲಿಬಾನ್​ಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
72 ಸಿಖ್ಖರು, ಹಿಂದುಗಳಿಗೆ ತಡೆ:ಸಿಖ್ಖ ಮತ್ತು ಹಿಂದು ಸಮುದಾಯದ 72 ಮಂದಿಗೆ ಭಾರತೀಯ ವಾಯುಪಡೆ ವಿಮಾನ ಹತ್ತಲು ತಾಲಿಬಾನಿಗಳು ಅವಕಾಶ ನೀಡಲಿಲ್ಲ ಎಂದು ಹೇಳಲಾಗಿದೆ. ಇವರು ಶುಕ್ರವಾರವೇ ಕಾಬುಲ್ ವಿಮಾನ ನಿಲ್ದಾಣಕ್ಕೆ ಬಂದು ಭಾರತದ ವಿಮಾನಕ್ಕಾಗಿ ಕಾಯುತ್ತಿದ್ದರು ಎಂದು ವಿಶ್ವ ಪಂಜಾಬಿ ಒಕ್ಕೂಟದ ವಿಕ್ರಂಜಿತ್ ಸಿಂಗ್ ಸಾಹ್ನಿ ಹೇಳಿದ್ದಾರೆ.
‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಅಪರಿಚಿತ

‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 13 =
Remember me
