ಅಯೋಧ್ಯೆ :ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ಸಂಗ್ರಹಿಸಿದ್ದ 15,000 ಚೆಕ್​ಗಳು ಬೌನ್ಸ್ ಆಗಿವೆ. ಇದರ ಒಟ್ಟು ಮೌಲ್ಯ 22 ಕೋಟಿ ರೂಪಾಯಿ ಎಂಬ ಅಂಶ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಆಡಿಟ್ ವರದಿಯಲ್ಲಿ ಬಹಿರಂಗವಾಗಿದೆ. ಬಹುತೇಕ ಚೆಕ್​ಗಳು ಖಾತೆಯಲ್ಲಿ ಕಡಿಮೆ ಮೊತ್ತ ಇದ್ದ ಕಾರಣ ಬೌನ್ಸ್ ಆಗಿದ್ದವು. ಇನ್ನು ಉಳಿದವು ತಾಂತ್ರಿಕ ದೋಷದ ಕಾರಣ ಬೌನ್ಸ್ ಆಗಿವೆ.
ಚೆಕ್ ನೀಡಿದವರನ್ನು ಸಂರ್ಪಸಿ ಮತ್ತೊಮ್ಮೆ ಚೆಕ್ ನೀಡಿ ದೇಣಿಗೆ ಪಾವತಿಸುವಂತೆ ಬ್ಯಾಂಕುಗಳು ಹೇಳತೊಡಗಿವೆ. ಈ ಕೆಲಸ ಪ್ರಗತಿಯಲ್ಲಿದೆ ಎಂದು ಟ್ರಸ್ಟ್​ನ ಸದಸ್ಯ ಡಾ.ಅನಿಲ್ ಮಿಶ್ರಾ ತಿಳಿಸಿದ್ದಾರೆ. ಬೌನ್ಸ್ ಆದ ಚೆಕ್​ಗಳ ಪೈಕಿ 2,000ದಷ್ಟು ಚೆಕ್​ಗಳು ಅಯೋಧ್ಯೆಯಿಂದಲೇ ಸಂಗ್ರಹಿಸಿದ್ದಾಗಿದೆ. ವಿಶ್ವ ಹಿಂದು ಪರಿಷದ್ (ವಿಹಿಂಪ) ಜನವರಿ 15ರಿಂದ ಫೆಬ್ರವರಿ 17ರ ತನಕ ದೇಣಿಗೆ ಸಮರ್ಪಣೆ ಕಾರ್ಯ ನಡೆಸಿತ್ತು. ಅಂದಾಜು 5,000 ಕೋಟಿ ರೂಪಾಯಿಯನ್ನು ಈ ಅಭಿಯಾನದಲ್ಲಿ ಸಂಗ್ರಹಿಸಲಾಗಿದೆ. ಅಂತಿಮ ಲೆಕ್ಕಾಚಾರ ಇನ್ನೂ ಬಹಿರಂಗವಾಗಿಲ್ಲ.
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಚುನಾವಣಾ ಪ್ರಚಾರಕ್ಕೆ ನಿಷೇಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 1 =
Remember me
