ಥಾಣೆ:ಸೇತುವೆ ನಿರ್ಮಾಣದ ಸ್ಥಳದಲ್ಲಿ ಕ್ರೇನ್​ ಕುಸಿದು 16 ಕಾರ್ಮಿಕರು ಸಾವಿಗೀಡಾಗಿರುವ ಭೀಕರ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಪುರದಲ್ಲಿ ನಿನ್ನೆ (ಜು. 31) ರಾತ್ರಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಥಾಣೆಯ ಸಮೃದ್ಧಿ ಎಕ್ಸ್​ಪ್ರೆಸ್​ವೇನಲ್ಲಿ ಸೇತುವೆ ನಿರ್ಮಾಣ ಮಾಡುವ ಕೆಲಸದಲ್ಲಿ ಕಾರ್ಮಿಕರು ಬಿಜಿಯಾಗಿದ್ದ ವೇಳೆ 100 ಅಡಿ ಎತ್ತರದಿಂದ ಕಾರ್ಮಿಕರ ಮೇಲೆ ಕ್ರೇನ್​ ಕುಸಿದು ಬಿದ್ದಿದೆ. ಇದರ ಪರಿಣಾಮ ಸ್ಥಳದಲ್ಲೇ 16 ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದಿರುವ ಅವಶೇಷಗಳ ನಡುವೆಯೇ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಮಿಕರು ವಿಶೇಷ ಕ್ರೇನ್ ಆಗಿರುವ ಗಿರ್ಡರ ಲಾಂಚಿಂಗ್​ ಯಂತ್ರವನ್ನು ನಿರ್ವಹಿಸುತ್ತಿದ್ದರು. ಈ ಯಂತ್ರವು ಹೆದ್ದಾರಿಗಳು, ರೈಲು ಸೇತುವೆಗಳ ನಿರ್ಮಾಣದಲ್ಲಿ ಬಳಸಲಾಗುವ ದೊಡ್ಡ ಸ್ಟೀಲ್​ ಬೀಮ್​ ಅಥವಾ ಗಿರ್ಡರ್‌ಗಳನ್ನು ಸಾಗಿಸುತ್ತದೆ ಮತ್ತು ದೊಡ್ಡ ಕಟ್ಟಡಗಳಿಗೆ ಅಡಿಪಾಯವನ್ನು ರೂಪಿಸಲು ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ:ಸ್ಥಳ ತೋರಿಸದೆ ವರ್ಗ, ಪಿಡಿಒಗಳು ಕಂಗಾಲು: ಆಯುಕ್ತಾಲಯದಲ್ಲಿ ಹಾಜರಿ ಹಾಕುವ ಪಜೀತಿ, ರಚನೆಯಾಗದ ವೃಂದ-ನೇಮಕಾತಿ ನಿಯಮ
ಪೊಲೀಸರ ಪ್ರಕಾರ ಮಂಗಳವಾರ ಮುಂಜಾನೆ ಶಹಪುರದ ಸರ್ಲಾಂಬೆ ಗ್ರಾಮದ ಬಳಿ ಕಾರ್ಮಿಕರು ಸಮೃದ್ಧಿ ಎಕ್ಸ್‌ಪ್ರೆಸ್‌ವೇನ ಮೂರನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಇತರ ತುರ್ತು ಸೇವೆಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
701 ಕಿಲೋಮೀಟರ್ ಉದ್ದದ ಸಮೃದ್ಧಿ ಮಹಾಮಾರ್ಗವನ್ನು ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇ ಎಂದೂ ಕರೆಯುತ್ತಾರೆ. ಇದು ಎರಡು ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದೆ. ಮಹಾರಾಷ್ಟ್ರದ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಎಕ್ಸ್‌ಪ್ರೆಸ್‌ವೇ ಅನ್ನು ನಿರ್ಮಾಣ ಮಾಡುತ್ತಿದೆ. ಇದರ ಮೊದಲ ಹಂತವು ನಾಗ್ಪುರದಿಂದ ಶಿರಡಿಗೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಾರ್ಗವನ್ನು ಉದ್ಘಾಟಿಸಿದರು. (ಏಜೆನ್ಸೀಸ್​)
ಡ್ರ್ಯಾಗನ್​ ಫ್ರೂಟ್ಸ್​ ನಿಯಮಿತ ಸೇವನೆಯಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ

ಈರುಳ್ಳಿಗೆ ಗುಡ್​ಬೈ, ಪರ್ಯಾಯ ಬೆಳೆಗೆ ಜೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
