ನವದೆಹಲಿ:ಆನ್​ಲೈನ್ ಮೂಲಕ ನಡೆಯುವ ನಗದು ವ್ಯವಹಾರದಲ್ಲಿನ ವಂಚನೆ ತಡೆಯಲು ಆರ್​ಬಿಐ ಡಿಜಿಟಲ್ ಪೇಮೆಂಟ್ ಪ್ರಕ್ರಿಯೆಯನ್ನು ಇನ್ನಷ್ಟು ಸುರಕ್ಷತೆಗೊಳಿಸಲು ಮುಂದಾಗಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ನಡೆಯುವ ನಗದು ವರ್ಗಾವಣೆಗೆ ಮೂರಂಕಿಯ ಸಿವಿವಿ (ಕಾರ್ಡ್ ವೆರಿಫಿಕೇಷನ್ ವ್ಯಾಲ್ಯೂ) ಸಂಖ್ಯೆಯ ಜತೆಗೆ ಕಾರ್ಡ್​ನ 16 ಸಂಖ್ಯೆ ಮತ್ತು ಕಾರ್ಡ್ ಎಕ್ಸ್​ಪೈರಿ ದಿನಾಂಕ ನಮೂದಿಸುವುದನ್ನು ಪ್ರತಿ ವ್ಯವಹಾರಕ್ಕೂ ಕಡ್ಡಾಯ ಮಾಡಲು ಬಯಸಿದೆ. ಈ ಹೊಸ ನಿಯಮ ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸುವವರಿಗೆ ಈ 16 ಸಂಖ್ಯೆಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ, ಹೊಸ ನಿಯಮವು ಕಾರ್ಡ್ ಬಳಕೆದಾರರ ಮಾಹಿತಿಗೆ ಸುರಕ್ಷತೆ ಒದಗಿಸುತ್ತದೆ. ಅಮೆಜಾನ್, ಫ್ಲಿಪ್​ಕಾರ್ಟ್​ಗಳಂತಹ ಇ-ಕಾಮರ್ಸ್ ತಾಣಗಳು, ಪೇಟಿಮ್ ಮತ್ತು ಗೂಗಲ್ ಪೇ ರೀತಿಯ ಪಾವತಿ ವೇದಿಕೆಗಳು ಗ್ರಾಹಕರ ಡೇಟಾವನ್ನು ತಮ್ಮ ಸರ್ವರ್​ಗಳಲ್ಲಿ ಸಂಗ್ರಹಿಸುವುದನ್ನು ತಡೆಯುವ ಉದ್ದೇಶ ಈ ಹೊಸ ನಿಯಮದ ಹಿಂದೆ ಇದೆ. ಸದ್ಯ ಇ-ಕಾಮರ್ಸ್ ಮರ್ಚೆಂಟ್ ಸೈಟ್​ಗಳು ಮತ್ತು ಪಾವತಿಯ ಗೇಟ್​ವೇಗಳು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇರಿಸಿಕೊಂಡಿರುತ್ತವೆ. ಪ್ರತಿ ಪಾವತಿ ಸಂದರ್ಭದಲ್ಲಿ ಸಿವಿವಿ ಅಥವಾ ಪಿನ್ (ಗೌಪ್ಯ ಸಂಖ್ಯೆ) ಜತೆಗೆ ಕಾರ್ಡ್ ದಾರರ ಮೊಬೈಲ್​ಗೆ ಬರುವ ಒಟಿಪಿ ನಮೂದಾಗಬೇಕು. ಆಗ ಪಾವತಿ ಆಗುತ್ತದೆ. ಆದರೆ ಹೊಸ ನಿಯಮದಲ್ಲಿ 16 ಸಂಖ್ಯೆಯ ಕಾರ್ಡ್ ನಂಬರ್ ಮತ್ತು ಎಕ್ಸ್​ಪೈರಿ ದಿನಾಂಕವನ್ನು ಪ್ರತಿ ಸಲವೂ ನಮೂದಿಸಬೇಕಾಗುತ್ತದೆ.
ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು

ಇವರು ಅಂಥಿಂಥ ಕಳ್ಳರಲ್ಲ: ಇವರ ಬಳಿ ಇತ್ತು ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 4 =
Remember me
