ದುಬೈ:ಇಲ್ಲಿನ ಅಲ್​ ರಾಸ್​ ವಸತಿ ಕಟ್ಟಡದ 4ನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೇರಳ ಮೂಲದ ಇಬ್ಬರು ಸೇರಿದಂತೆ 16 ಮಂದಿ ದುರಂತ ಸಾವಿಗೀಡಾಗಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯರಾತ್ರಿ 12 ಗಂಟೆಗೆ ದುಬೈನ ತಲಾಲ್​ ಸೂಪರ್​ ಮಾರ್ಕೆಟ್​ ಬಳಿ ಇರುವ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗಾರ ಕಲಂಗದನ್ ಮೂಲದ ರಿಜೇಶ್​ (38) ಮತ್ತು ಅವರ ಪತ್ನಿ ಜೇಶಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಕಾಮತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿಗಳ ಬಳಕೆ: 6 ಶಿಕ್ಷಕಿಯರ ಬಂಧನ, ಸ್ಫೋಟಕ ಮಾಹಿತಿ ಬಹಿರಂಗ
ಮೃತರಲ್ಲಿ ತಮಿಳುನಾಡು ಮೂಲದ ಅಬ್ದುಲ್ ಖಾದರ್ ಮತ್ತು ಸಲಿಯಾಕುಂದ್, ಪಾಕಿಸ್ತಾನದ ಮೂವರು ಮತ್ತು ನೈಜೀರಿಯಾದ ಮಹಿಳೆ ಸೇರಿದ್ದಾರೆ. ಶಾರ್ಟ್ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ದಟ್ಟ ಹೊಗೆ ರಿಜೇಶ್ ಅವರು ವಾಸವಿದ್ದ ಕೊಠಡಿಗೂ ವ್ಯಾಪಿಸಿ, ದಂಪತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಿಜೇಶ್​ ಅವರು ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಜೇಶಿ ದುಬೈನ ಕ್ರೆಸೆಂಟ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿ ಕೂಡ ಬೆಂಕಿಯಲ್ಲಿ ಮೃತಪಟ್ಟಿದ್ದಾರೆ. ಮೃತರ ಎಲ್ಲ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಸಾಮಾಜಿಕ ಕಾರ್ಯಕರ್ತ ನಾಸೀರ್ ವತನಪಲ್ಲಿ ಮಾಹಿತಿ ನೀಡಿದ್ದಾರೆ.
ದುಬೈ ಪೊಲೀಸರು, ದುಬೈನಲ್ಲಿರುವ ಭಾರತೀಯ ದೂತಾವಾಸ, ಇತರ ರಾಜತಾಂತ್ರಿಕ ನಿಯೋಗಗಳು ಮತ್ತು ಮೃತರ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇನೆ ಎಂದು ನಾಸೀರ್​ ವತನಪಲ್ಲಿ ಅವರು ಹೇಳಿದರು.(ಏಜೆನ್ಸೀಸ್​)
ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

ಈ ಜೆಡಿಎಸ್ ಅಭ್ಯರ್ಥಿ ಬರೋಬ್ಬರಿ 206 ಕೋಟಿ ರೂ. ಆಸ್ತಿ ಒಡೆಯ!

ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
