ಭೋಪಾಲ್​:ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳನ್ನು ವೈದ್ಯರು ಬದುಕುಳಿಸಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. 48 ಕೆಜಿ ತೂಕವಿದ್ದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 16 ಕೆಜಿ ತೂಕದ ಗೆಡ್ಡೆ ಇದ್ದು, ಅದನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಮಧ್ಯ ಪ್ರದೇಶದ ರಾಜ್​ಘರ್​ ಮೂಲದ ಮಹಿಳೆ ಕಳೆದ ಕೆಲ ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳಂತೆ. ಇತ್ತೀಚೆಗೆ ಹೊಟ್ಟೆ ಊದಿಕೊಂಡಿದ್ದು, ಆಕೆಗೆ ನಡೆಯುವುದು, ಓಡಾಡುವುದು ಕೂಡ ದೊಡ್ಡ ಸಮಸ್ಯೆಯಾಗಿತ್ತಂತೆ. ಭೋಪಾಲ್​ನ ಆಸ್ಪತ್ರೆಗೆ ಬಂದ ಆಕೆ ವೈದ್ಯರಿಗೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ. ವೈದ್ಯರು ಆಪರೇಷನ್​ ಮಾಡಬೇಕೆಂದು ತಿಳಿಸಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.
ಹೊಟ್ಟೆಯಲ್ಲಿದ್ದ ಗೆಡ್ಡೆಯ ಗಾತ್ರ ಬಹಳ ದೊಡ್ಡದಿರುವುದಾಗಿ ಅರಿತಿದ್ದ ವೈದ್ಯರು ಅತ್ಯಂತ ಸೂಕ್ಷ್ಮವಾಗಿ ಆಪರೇಷನ್​ಮಾಡಿದ್ದಾರೆ. ಬರೋಬ್ಬರಿ ಆರು ಗಂಟೆಗಳ ಕಾಲ ಆಪರೇಷನ್ ಮಾಡಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಆಕೆಯ ಬೇರೆ ನರಗಳಿಗೆ ಸಮಸ್ಯೆಯಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಕೆಲ ದಿನಗಳ ಕಾಲ ಆಪರೇಷನ್​ ಮಾಡದೆಯೆ ಹಾಗೆಯೇ ಬಿಟ್ಟಿದ್ದರೆ ಹೊಟ್ಟೆ ಒಡೆದು ಹೋಗುತ್ತಿತ್ತು ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)
8 ವರ್ಷದ ಬಾಲಕಿಯನ್ನು ಕಸದ ತೊಟ್ಟಿಯೊಳಗೆ ರೇಪ್​ ಮಾಡಿದ ಕಿರಾತಕ! ಬಾಯಿ ಮುಚ್ಚಿಸಲು ₹5 ಕೊಟ್ಟ!

ಶುಭ ಬಿಗ್​ಬಾಸ್​ನಲ್ಲಿದ್ದರೆ, ಆಕೆಯ ಭಾವಿ ಪತಿ ಏನು ಮಾಡುತ್ತಿದ್ದಾರೆ ಗೊತ್ತಾ? ಸುದೀಪ್​ ಬಿಚ್ಚಿಟ್ಟ ಸತ್ಯ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fourteen =
Remember me
