ಗಿಲ್ಗಿಟ್​: ಇದ್ದಕ್ಕಿದ್ದಂತೆ ಭೂಕುಸಿತ ಸಂಭವಿಸಿದ್ದರಿಂದ, ಬಸ್​ನಲ್ಲಿದ್ದ ಹದಿನಾರು ಜನರಿಗೆ ಅದು ಅವರ ಜೀವನದ ಕೊನೆಯ ಪ್ರಯಾಣವಾಗಿ ಪರಿಣಮಿಸಿದೆ. ಇಂಥದ್ದೊಂದು ಘೋರ ದುರಂತ ಶನಿವಾರ ತಡರಾತ್ರಿ ಸಂಭವಿಸಿದೆ.
ಬಸ್ಸನ್ನು ಆವರಿಸಿಕೊಂಡಿರುವ ಮಣ್ಣನ್ನು ತೆರವುಗೊಳಿಸಲಾಗಿದ್ದು, ಹದಿನಾರು ಜನರ ಶವಗಳನ್ನು ಹೊರತೆಗೆಯಲಾಗಿದೆ. ಆ ಪೈಕಿ ಚಾಲಕ-ನಿರ್ವಾಹಕ ಸೇರಿ ಆರು ಮಂದಿಯ ವಿವರಗಳು ಪತ್ತೆಯಾಗಿವೆ. ಉಳಿದ ಹತ್ತು ಜನರ ಕುರಿತ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಪಾಕ್​ ಆಕ್ರಮಿತ ಕಾಶ್ಮೀರದ ಬಲ್ಟಿಸ್ತಾನ್​-ಗಿಲ್ಗಿಟ್​ ಪ್ರದೇಶದ ಜಗ್ಲೋಟ್​- ಸ್ಕರ್ದು ರಸ್ತೆಯಲ್ಲಿ ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ರಾವಲ್ಪಿಂಡಿಯಿಂದ ಹೊರಟಿದ್ದ ಈ ಬಸ್​ನಲ್ಲಿ ಅವಘಡ ಸಂಭವಿಸುವ ಮುನ್ನ 18 ಪ್ರಯಾಣಿಕರಿದ್ದು, ಆ ಪೈಕಿ ಇಬ್ಬರು ಅವರ ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಎಲ್ಲ ಶವಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
