ಮುಂಬೈ:ತಮ್ಮ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ 16 ಶಾಸಕರಿಗೆ ಅನರ್ಹ ಅಸ್ತ್ರ ಬಳಸಿರುವ ಶಿವಸೇನೆ ನೋಟೀಸ್​ ಜಾರಿ ಮಾಡಿದ್ದು, ಸೋಮವಾರದೊಳಗೆ ಉತ್ತರಿಸಲು ಸೂಚಿಸಿದೆ.
ರೆಬೆಲ್​ ನಾಯಕ ಏಕನಾಥ್​ ಶಿಂಧೆ ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವ 16 ಶಾಸಕರಿಗೆ ಉಪಸಭಾಪತಿಯಿಂದ ಶನಿವಾರ ಅನರ್ಹತೆ ನೋಟಿಸ್​ ನೀಡಲಾಗಿದೆ. ಸೋಮವಾರ ಸಂಜೆ 5.30ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. 16ರ ಪಟ್ಟಿಯಲ್ಲಿ ಶಿಂಧೆ ಹೆಸರಿದೆ.
ಅನರ್ಹತೆಯಿಂದ 16 ಶಾಸಕರು ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಏಕನಾಥ್​ ಶಿಂಧೆ ಅವರೂ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಇದರಿಂದ ನಿರ್ಣಾಯಕವಾಗಿ ಅವರ ಸರ್ಕಾರ ರಚಿಸುವ ಕನಸು ಭಗ್ನಗೊಳ್ಳಲಿದೆ ಎಂಬುದು ಶಿವಸೇನೆಯ ರಾಜಕೀಯ ಲೆಕ್ಕಾಚಾರವಾಗಿದೆ.
ಇದರಲ್ಲಿ ಇಬ್ಬರು ಸ್ವತಂತ್ರ ಶಾಸಕರಾದ ಮಹೇಶ್​ ಬಾಲ್ಡಿ ಮತ್ತು ವಿನೋದ್​ ಅಗರ್ವಾಲ್​​ ಅವರು ಬಿಜೆಪಿಗೆ ಹತ್ತಿರವಾಗಿದ್ದು, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಇನ್ನೂ ಬಾಕಿ ಇದೆ. ಮತ್ತು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಪ್ರತಿಯಾಗಿ ನೋಟಿಸ್ ನೀಡಿದ್ದಾರೆ.(ಏಜೆನ್ಸೀಸ್​)
ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
