ತೆಲಂಗಾಣ:ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ವಿವಾಹವನ್ನು ಯಾವುದೇ ಆತಂಕವಿಲ್ಲದೇ ಲಾಕ್​ಡೌನ್​ ನಡುವೆಯೇ ನೆರವೇರಿಸಿದವರು ಈಗ ಪೇಚಿಗೆ ಸಿಲುಕಿದ್ದಾರೆ. ಹೈದರಾಬಾದ್ ಹೊರವಲಯವಾದ ಮಲ್ಕಾಜ್ ಗಿರಿ ಮೆದ್ ಚಾಲ್ ಜಿಲ್ಲೆಯ ಗುಂಡಲಾಪೋಂಚಾಪಲ್ಲಿಯ ದೇವಸ್ಥಾನವೊಂದರಲ್ಲಿ ಈ ಮದುವೆ ನಡೆದಿತ್ತು.
ಬಾಲಕಿ ಮತ್ತು 23 ವರ್ಷದ ವರನ ಪಾಲಕರು, ಮದುವೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ ಗ್ರಾಮಸ್ಥರು ಮಾತ್ರವಲ್ಲದೇ ಮದುವೆಯನ್ನು ನಡೆಸಿಕೊಟ್ಟ ಅರ್ಚಕರು ಎಲ್ಲರ ವಿರುದ್ಧವೂ ಕೇಸು ದಾಖಲಾಗಿದೆ.
ಇದನ್ನೂ ಓದಿ:ಮುಂದುವರೆದ ಕಾಂಗ್ರೆಸ್​ ಶಾಸಕರ ರಾಜೀನಾಮೆ: ಇಂದು ಪಕ್ಷ ತೊರೆದ ಇಬ್ಬರು ನಾಯಕರು
ಮಕ್ಕಳ ಹಕ್ಕುಗಳ ಸಂಘಟನೆಯ (ಬಾಲಾಲಾ ಹಕ್ಕುಲಾ ಸಂಘಂ) ಅಚ್ಯುತ ರಾವ್ ಇವರ ವಿರುದ್ಧ ಕೇಸು ದಾಖಲು ಮಾಡಿದ್ದಾರೆ. 23 ವರ್ಷದ ಗುತ್ತಿಗೆ ಕಾಮಗಾರಿಯ ದಿನಗೂಲಿ ನೌಕರನ ಜತೆ ಬಾಲಕಿಯ ವಿವಾಹ ನಡೆದಿರುವುದಾಗಿ ಅವರು ಆರೋಪಿಸಿದ್ದಾರೆ. ಬಾಲಕಿಯ ವಯಸ್ಸು 16 ಎಂದು ಪಾಲಕರು ಹೇಳುತ್ತಿದ್ದರೂ ಆಕೆ 6ನೇ ತರಗತಿಯಲ್ಲಿ ಕಲಿಯುತ್ತಿರುವ ಕಾರಣ, ವಯಸ್ಸು ಇನ್ನೂ ಚಿಕ್ಕದಿದೆ ಎಂದು ಅಚ್ಯುತ್​ ರಾವ್​ ಆರೋಪಿಸಿದ್ದಾರೆ.ಒಂದು ವೇಳೆ ಪಾಲಕರು ಹೇಳುವಂತೆ ಆಕೆಯದ್ದು 16 ವರ್ಷ ವಯಸ್ಸಾಗಿದ್ದರೂ ಕೂಡ ಇದು ಬಾಲ್ಯ ವಿವಾಹ ಆಗುವ ಕಾರಣ, ಮದುವೆ ನಡೆಸಿಕೊಟ್ಟ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಘಟನೆಯನ್ನು ಪೊಲೀಸರು ಖಚಿತಪಡಿಸಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಮದುಮಗ ಕುಟುಂಬಸ್ಥರ ವಿರುದ್ಧ ಹಾಗೂ ಅರ್ಚಕರ ವಿರುದ್ಧ ಐಪಿಸಿ ಸೆಕ್ಷನ್ 376ರ ಪ್ರಕಾರ ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…
ಜತೆಗೆ, ಈಕೆ ಪ್ರಾಪ್ತಳಲ್ಲ ಎಂದು ಗೊತ್ತಿದ್ದರೂ ಮದುವೆಗೆ ಹಾಜರಾಗಿರುವ ಗ್ರಾಮಸ್ಥರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಅಚ್ಯುತ್​ ರಾವ್​ ಕೋರಿದ್ದಾರೆ. ಅಷ್ಟೇ ಅಲ್ಲದೇ, ಮದುವೆಯ ವಿಡಿಯೋ ನೋಡಿದಾಗ ಅದರಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿರುವುದೂ ಕಂಡುಬಂದಿದೆ. ಯಾರು ಕೂಡ ಮಾಸ್ಕ್​ ಧರಿಸದೇ ಒಟ್ಟಿಗೇ ಇರುವುದು ಸಾಬೀತಾಗಿರುವ ಕಾರಣ, ಅದರ ವಿರುದ್ಧವೂ ದೂರು ದಾಖಲು ಮಾಡಿಕೊಳ್ಳಲಾಗಿದೆ.(ಏಜೆನ್ಸೀಸ್​)
ಮುಂದುವರೆದ ಕಾಂಗ್ರೆಸ್​ ಶಾಸಕರ ರಾಜೀನಾಮೆ: ಇಂದು ಪಕ್ಷ ತೊರೆದ ಇಬ್ಬರು ನಾಯಕರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × five =
Remember me
