ಮುಂಬೈ:ಕಾಮುಕನೊಬ್ಬ 16 ವರ್ಷದ ಬಾಲಕಿಗೆ ಕಾಮೋತ್ತೇಜಕ ಚುಚ್ಚುಮದ್ದು ಮತ್ತು ಮಾತ್ರೆಗಳನ್ನು ನೀಡಿ 8 ವರ್ಷಗಳ ಕಾಲ ಅತ್ಯಾಚಾರ ಮಾಡಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಪ್ರಕರಣದಲ್ಲಿ ಇದೀಗ ನಾಲ್ವರನ್ನು ಬಂಧಿಸಲಾಗಿದೆ.
ಬಾಲಕಿಯ ನೆರೆ ಮನೆಯ ವ್ಯಕ್ತಿಯೇ ಇಂತಹ ಕೃತ್ಯ ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಕಾಮೋತ್ತೇಜಕ ಮಾತ್ರೆ ಅಥವಾ ಇಂಜೆಕ್ಷನ್​ ಅನ್ನು ಕೊಡಲಾಗುತ್ತಿತ್ತು. ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತು. ಅದನ್ನು ವಿರೋಧಿಸಲು ಆಕೆ ಮುಂದಾದರೆ ಆಕೆ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲಾಕ್​ಮೇಲ್​ ಮಾಡಲಾಗುತ್ತಿತ್ತು ಎಂದು ಬಾಲಕಿ ದೂರಿನಲ್ಲಿ ಹೇಳಿದ್ದಾಳೆ. ಈ ವಿಚಾರ ಆರೋಪಿಯ ಹೆಂಡತಿಗೂ ತಿಳಿದಿತ್ತು ಎಂದು ತಿಳಿಸಲಾಗಿದೆ. ಸದ್ಯ ಆರೋಪಿ ಸ್ಥಾನದಲ್ಲಿರುವ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅವರ ಜತೆ ಬಾಲಕಿಯ ಚಿಕ್ಕಪ್ಪ ಮತ್ತು ಆತನ 19 ವರ್ಷದ ಮಗನನ್ನೂ ಬಂಧಿಸಲಾಗಿದೆ. ಬಾಲಕಿಯ ಚಿಕ್ಕಪ್ಪ ಆಕೆಯನ್ನು ಆತನ ಊರಿಗೆ ಕರೆದುಕೊಂಡು ಹೋಗಿ ಹಣಕ್ಕಾಗಿ ಮದುವೆ ಮಾಡಲು ಹೊರಟಿದ್ದ ಎಂದು ತಿಳಿಸಲಾಗಿದೆ. ಇದೇ ಸಮಯದಲ್ಲಿ ಆತನ ಮಗ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದಾಗಿಯೂ ದೂರಿನಲ್ಲಿ ದಾಖಲಿಸಲಾಗಿದೆ. ಆ ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)
ರೇಪ್​ ಮಾಡೋಕೆ ಪ್ರಯತ್ನ ಪಟ್ಟವರನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
