ವಿಜಯವಾಡ:ಹದಿಹರೆಯದ ಯುವಕನೊಬ್ಬ ತನಗಿಂತಲೂ ಹತ್ತು ವರ್ಷ ಕಿರಿಯವನಾದ ಬಾಲಕನೊಬ್ಬನಿಗೆ ಸಿಹಿತಿನಿಸಿನ ಆಮಿಷವೊಡ್ಡಿ, ಲೈಂಗಿಕವಾಗಿ ಬಳಸಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮತ್ತೊಂದೆಡೆ ಸಂತ್ರಸ್ತ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಹದಿನಾರು ವರ್ಷದ ಯುವಕನೊಬ್ಬ ಆರು ವರ್ಷದ ಬಾಲಕನ ಮೇಲೆ ಈ ‘ಅತ್ಯಾಚಾರ’ ನಡೆಸಿದ್ದಾನೆ. ಸಿಹಿತಿನಿಸು (ಕ್ಯಾಂಡಿ) ಕೊಡುವ ಆಮಿಷವೊಡ್ಡಿ ತನ್ನ ರೂಮ್​ಗೆ ಬಾಲಕನನ್ನು ಕರೆದೊಯ್ದ ಆತ ಅಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಾತ್ರವಲ್ಲ ವಿಷಯ ಯಾರಿಗೂ ಹೇಳದಂತೆ ಬೆದರಿಸಿ ಕೂಡ ಕಳಿಸಿದ್ದಾನೆ.
ಇದನ್ನೂ ಓದಿ:ಎರಡು ಸಲ ತಾಳಿ ಕಿತ್ತೆಸೆದರೂ ಬಿಡಲಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು: ಎಲ್ಲ ಹೇಳಿಕೊಂಡ ಸಂತ್ರಸ್ತೆ…
ಯುವಕನ ಅಕ್ರಮ ಹಾಗೂ ಅಸಹಜ ಲೈಂಗಿಕ ಸಂಪರ್ಕದಿಂದ ನೋವನುಭವಿಸಿದ್ದ ಹುಡುಗ, ಎಂದಿನಂತೆ ಇರದ್ದನ್ನು ಗಮನಿಸಿದ ಪಾಲಕರು ಏನಾಯಿತು ಎಂದು ಪದೇಪದೆ ವಿಚಾರಿಸಿದ ಮೇಲೆ ಅಸಲಿ ವಿಷಯ ಬಾಯಿಬಿಟ್ಟಿದ್ದಾನೆ. ಬಾಲಕ ನೀಡಿದ ಮಾಹಿತಿ ಮೇರೆಗೆ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬೊಲ್ಲಪಲ್ಲಿ ಮಂಡಲದ ಗುಟ್ಲಪಲ್ಲಿ ಎಂಬಲ್ಲಿ ಶುಕ್ರವಾರ ಈ ಪ್ರಕರಣ ನಡೆದಿದೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)
ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?

ಲಸಿಕೆ ಪಡೆದ ಬಳಿಕ ಮತ್ತೊಬ್ಬರ ಸಾವು; ಆರೋಗ್ಯ ಕಾರ್ಯಕರ್ತರ ಸಾವಿನ ಸಂಖ್ಯೆ ಮೂರಕ್ಕೇರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
