ನವದೆಹಲಿ:ಹಾವು ಕಡಿತದಿಂದ 12 ವರ್ಷದ ಬಾಲಕ ಮೃತಪಟ್ಟ 16 ವರ್ಷಗಳ ಬಳಿಕ, ಬಾಲಕ ತಂದೆಗೆ ದೆಹಲಿಯ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಮಹಾರಾಷ್ಟ್ರದ ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಗೆ ಸೂಚಿಸಿದೆ.
ಇದನ್ನೂ ಓದಿ:IPL 2024: ಮುಂಬೈ ವಿರುದ್ಧ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ಹಾವು ಕಡಿತದಿಂದ ಅಸ್ವಸ್ಥನಾಗಿದ್ದ ಮಹಾರಾಷ್ಟ್ರದ ಪರಶುರಾಮ್ ಲ್ಯಾಂಡ್ಗೆ ಅವರ ಮಗ ದೇವಾನಂದ್ 2007ರ ಅಕ್ಟೋಬರ್ ನಲ್ಲಿ ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಪರಿಗಣಿಸಿ ಲ್ಯಾಂಡ್ಗೆ ಅವರಿಗೆ ಪರಿಹಾರವನ್ನು ಏಪ್ರಿಲ್ 24 ರಂದು ಘೋಷಣೆ ಮಾಡಿದೆ.
ಹಾವು ಕಚ್ಚಿದ ಮಗ ದೇವಾನಂದ್​ನನ್ನು ದೂರುದಾರ ಪರಶುರಾಮ್ ಲ್ಯಾಂಡ್ಗೆ ಅವರು ಅಕ್ಟೋಬರ್ 2007 ರಲ್ಲಿ ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬಾಲಕನ ತಂದೆ ನೀಡಿರುವ ದೂರಿನ ಪ್ರಕಾರ, ಆಸ್ಪತ್ರೆಯ ಡಾಕ್ಟರ್ ಶೀನು ಗುಪ್ತಾ ಅವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ದೇವಾನಂದ್ ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು ಎಂದು ಹೇಳಲಾಗಿದೆ.
ಮಗನ ಸ್ಥಿತಿ ಗಂಭೀರವಾದ ಕಾರಣ ಚಿಕಿತ್ಸೆ ಮುಂದುವರಿಸುವಂತೆ ಪರಶುರಾಮ್ ಲ್ಯಾಂಡ್ಗೆ ವೈದ್ಯರಲ್ಲಿ ಮನವಿ ಮಾಡಿದರು. ನಂತರ ವೈದ್ಯರು ರೂ. 500 ಮೌಲ್ಯದ ಚುಚ್ಚುಮದ್ದನ್ನು ಸೂಚಿಸಿದರು. ಅವರ ಪತ್ನಿಯ ಚಿನ್ನಾಭರಣಗಳನ್ನು ಗಿರವಿ ಇಡುವ ಮೂಲಕ ಲ್ಯಾಂಡ್ಗೆ ಅವರು ಸೂಚಿಸಿದ ಇಂಜೆಕ್ಷನ್ ಮತ್ತು ಇತರ ದುಬಾರಿ ಚುಚ್ಚುಮದ್ದನ್ನು ಖರೀದಿಸಿದ್ದರು. ಆದರೆ ಆಸ್ಪತ್ರೆಗೆ ಹಿಂದಿರುಗಿ ಕೂಡಲೇ ಮಗನಿಗೆ ಚಿಕಿತ್ಸೆ ನೀಡುವಂತೆ ವಿನಂತಿಸಿದರು. ಆದರೂ ವೈದ್ಯರು ಹೆಚ್ಚಿನ ಹಣವನ್ನು ಠೇವಣಿ ಮಾಡುವವರೆಗೂ ಚಿಕಿತ್ಸೆ ಪ್ರಾರಂಭಿಸಲು ಎಂದು ಹೇಳಿದ್ದರು. ಇದರಿಂದ ದೇವಾನಂದ್ ರಾತ್ರಿ 8.30ರ ವೇಳೆಗೆ ಮೃತಪಟ್ಟಿದ್ದಾನೆ.ದೂರು ದಾಖಲು
ಈ ಕುರಿತು 2017ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಲ್ಯಾಂಡ್ಗೆ ದೂರು ದಾಖಲಿಸಿದ್ದರು. ಆದರೆ, ಮೂರು ವರ್ಷಗಳ ಅನಂತರ ಮಹಾರಾಷ್ಟ್ರ ರಾಜ್ಯ ಗ್ರಾಹಕ ನ್ಯಾಯಾಲಯವು ವೈದ್ಯ ಗುಪ್ತಾ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದರಿಂದ ಅಸಮಾಧಾನಗೊಂಡ ಆಸ್ಪತ್ರೆಯು ಎನ್‌ಸಿಡಿಆರ್‌ಸಿಗೆ ತೆರಳಿ ರಾಜ್ಯ ಗ್ರಾಹಕ ನ್ಯಾಯಾಲಯದ ಆದೇಶವು “ಕಾನೂನು ಅರ್ಹತೆಗಿಂತ ಹೆಚ್ಚಾಗಿ ಸಹಾನುಭೂತಿಯ ಆಧಾರದ ಮೇಲಿದೆ ಎಂದು ಆರೋಪಿಸಿ ದೂರು ನೀಡಿತ್ತು.
ಸೈಕಲ್​​ಗೆ ಡಿಕ್ಕಿ ಹೊಡೆದು, ಸವಾರನ ಸಮೇತ 2 ಕಿ.ಮೀ ಎಳೆದೊಯ್ದ ಚಾಲಕ: ಶಾಕಿಂಗ್‌ ವಿಡಿಯೋ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
