ಕೊಚ್ಚಿ:ಕಾಸರಗೋಡು ಜಿಲ್ಲೆಯ ಹದಿನಾರು ವರ್ಷದ ಹುಡುಗಿಗೆ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಆರೋಪ ಆಕೆಯ ಸಹೋದರನ ವಿರುದ್ಧ ಕೇಳಿಬಂದಿದ್ದು, ವೆಲ್ಲರಿಕ್ಕುಂದು ಠಾಣಾ ಪೊಲೀಸರು 22 ವರ್ಷದ ಆರೋಪಿ ಅಲ್ಬಿನ್​ ಬೆನ್ನಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಅಲ್ಬಿನ್​ ಮೊದಲು ಚಿಕನ್​ ಸಾಂಬಾರಿನಲ್ಲಿ ವಿಷ ಹಾಕಿ ಕುಟುಂಬವನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದ. ಬಳಿಕ ಆಗಸ್ಟ್​ 3ರಂದು ತಾನೇ ತಯಾರಿಸಿದ್ದ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿದ್ದ ಎನ್ನಲಾಗಿದೆ. ಇದನ್ನು ತಿಂದ ಸಹೋದರಿ ಅನ್ನ ಮೇರಿ (16) ಹಾಗೂ ವೃತ್ತಿಯಲ್ಲಿ ರೈತನಾಗಿರುವ ತಂದೆ ಬೆನ್ನಿಗೆ ಫುಡ್​ ಪಾಯಿಸನ್​ ಆಗಿ ಒದ್ದಾಡಿದ್ದಾರೆ. ಇದನ್ನು ಕಂಡ ಕುಟುಂಬಸ್ಥರು ಅವರನ್ನು ಕನ್ನೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೇರಿ ಆಗಸ್ಟ್​ 6ರಂದು ಮೃತಪಟ್ಟಿದ್ದು, ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೊಡ್​ನ ಮಿಮ್ಸ್​ (MIMS) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪೊಲಿಸ್​ ಶಿಷ್ಟಾಚಾರ ಪ್ರಕಾರ ಮರಣೋತ್ತರ ವರದಿ ನಡೆಸಲಾಗಿದ್ದು, ಮೇರಿ ಸಾವು ಅಸ್ವಾಭಾವಿಕ ಎಂದು ತಿಳಿದುಬಂದಿದೆ. ಅಲ್ಲದೆ, ಮೇರಿ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಐಸ್​ಕ್ರೀಮ್​ ತಿಂದ ಬೆನ್ನಲ್ಲೇ ತಂದೆ ಹಾಗೂ ಮಗಳ ದೇಹದಲ್ಲಿ ವಿಷ ಇರುವುದನ್ನು ತಿಳಿದ ಪೊಲೀಸರಿಗೆ ಅನುಮಾನ ಶುರುವಾಗಿದೆ.
ಪ್ರಕರಣದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರಿಗೆ ಅಲ್ಬಿನ್​ ಹಾಗೂ ತಾಯಿಯ ಮೇಲೆ ಅನುಮಾನ ಬಂದಿದೆ. ಏಕೆಂದರೆ, ಐಸ್​ಕ್ರೀಮ್​ ತಿಂದರೂ ಅಲ್ಬಿನ್​ಗೆ ಏನು ಆಗದೇ ಇರುವುದು ಹಾಗೂ ತಾಯಿ ಕೂಡ ಆರೋಗ್ಯವಾಗಿ ಉಳಿದುಕೊಂಡಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಇದೇ ಆರೋಪದಲ್ಲಿ ಗುರುವಾರ ಅಲ್ಬಿನ್​ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿ, ಮನೆಯ ತಪಾಸಣೆಯನ್ನು ಮಾಡಿದ್ದಾರೆ. ತಾಯಿ ಐಸ್​ಕ್ರೀಮ್​ ತಿನ್ನದೇ ಇರುವುದರಿಂದ ಬದುಕುಳಿದಿದ್ದಾರೆ. ಹೀಗಾಗಿ ಕೃತ್ಯದಲ್ಲಿ ತಾಯಿಯ ಪಾತ್ರ ಇಲ್ಲ ಎಂಬುದು ತಿಳಿದುಬಂದಿರುವುದಾಗಿ ಸರ್ಕಲ್​ ಇನ್ಸ್​ಪೆಕ್ಟರ್​ ಹೇಳಿದ್ದಾರೆ.
ಪೊಲೀಸ್​ ಮೂಲಗಳ ಪ್ರಾಥಮಿಕ ತನಿಖಾ ವರದಿಯ ಪ್ರಕಾರ ತಾನೊಬ್ಬನೇ ಏಕಾಂಗಿ ಜೀವನ ನಡೆಸುವುದಕ್ಕಾಗಿ ಇಡೀ ಕುಟುಂಬಕ್ಕೆ ವಿಷವುಣಿಸಲು ಅಲ್ಬಿನ್​ ಯತ್ನಿಸಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ, ಆತ ಮಾದಕ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ. ಅದ್ಯ ಆರೋಪಿ ಪೊಲೀಸ್​ ಬಂಧನದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + five =
Remember me
