ಮುಂಬೈ:ಕಳೆದ ಕೆಲವು ವರ್ಷಗಳಲ್ಲಿ ಈ ಕಂಪನಿಯ ಷೇರುಗಳು 16000% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈಗ ಕಂಪನಿಯು ಈಗ ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ಕಂಪನಿ ಮಂಡಳಿ ಸಭೆ ಫೆಬ್ರವರಿ 2ರಂದು ಸಭೆ ನಡೆಸಲಿದೆ. ಹೀಗಾಗಿ, ಈ ಕಂಪನಿಯ ಷೇರುಗಳು ಜನವರಿ 25ರಂದು ಒಂದೇ 10% ಏರಿಕೆ ಕಂಡಿವೆ.
ಇದೇ ಗುಜರಾತ್​ ಅಂಬುಜಾ ಎಕ್ಸ್​ಪೋರ್ಟ್ಸ್ ಲಿಮಿಟೆಡ್​ (Gujarat Ambuja Exports Ltd.) ಕಂಪನಿ.
ಸ್ಮಾಲ್​ ಕ್ಯಾಪ್ ಕಂಪನಿ ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್‌ನ ಷೇರುಗಳು ಕಳೆದ ಕೆಲವು ವರ್ಷಗಳಲ್ಲಿ ಪ್ರಚಂಡ ಆದಾಯವನ್ನು ನೀಡಿವೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳು 2 ರೂಪಾಯಿಯಿಂದ 360 ರೂಪಾಯಿ ದಾಟಿವೆ. ಈ ಅವಧಿಯಲ್ಲಿ ಈ ಕಂಪನಿಯ ಷೇರುಗಳು ಶೇಕಡಾ 16000 ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.
ಕೃಷಿ ಸಂಸ್ಕರಣೆ ಉದ್ಯಮಕ್ಕೆ ಸಂಬಂಧಿಸಿದ ಈ ಕಂಪನಿಯು ಈಗ ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳ ಉಡುಗೊರೆಯನ್ನು ನೀಡಲು ಹೊರಟಿದೆ. ಈ ಕಂಪನಿ ಇದೇ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ನೀಡಲು ತಯಾರಿ ನಡೆಸುತ್ತಿದೆ.
ಕಂಪನಿಯ ನಿರ್ದೇಶಕರ ಮಂಡಳಿಯು ಫೆಬ್ರವರಿ 2, 2024 ರಂದು ಸಭೆ ಸೇರುತ್ತಿದೆ ಎಂದು ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್ ತನ್ನ ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಸಭೆಯಲ್ಲಿ ಕಂಪನಿಯ ಆಡಳಿತ ಮಂಡಳಿಯು ಬೋನಸ್ ಷೇರುಗಳ ವಿಷಯವನ್ನು ಪರಿಗಣಿಸಿ ಅನುಮೋದಿಸಲಿದೆ. ಇದು ಈ ಕಂಪನಿಯ ಮೊದಲ ಬೋನಸ್ ಷೇರು ಆಗಲಿದೆ. ಈ ಕಂಪನಿಯು ಅಕ್ಟೋಬರ್ 2020 ರಲ್ಲಿ ಷೇರುಗಳನ್ನು ವಿಭಜನೆ ಮಾಡಿತ್ತು. ಆಗ ಕಂಪನಿಯು ರೂ. 2 ಮುಖಬೆಲೆಯ ಷೇರುಗಳನ್ನು ರೂ.1 ಮುಖ ಬೆಲೆಯ ಷೇರುಗಳಾಗಿ ವಿಂಗಡಿಸಿತ್ತು.
ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್‌ನ ಷೇರುಗಳ ಬೆಲೆ 23 ಜನವರಿ 2004 ರಂದು 2.19 ರೂಪಾಯಿ ಇತ್ತು.ಈ ಕಂಪನಿಯ ಷೇರುಗಳ ಬೆಲೆ ಜನವರಿ 25, 2024 ರಂದು 10% ರಷ್ಟು ಹೆಚ್ಚಳ ಕಂಡು, 367.90 ರೂ.ಗೆ ತಲುಪಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳು ಶೇಕಡಾ 16715ರಷ್ಟು ಲಾಭವನ್ನು ನೀಡಿವೆ. ಕಳೆದ 10 ವರ್ಷಗಳಲ್ಲಿ ಕಂಪನಿಯ ಷೇರುಗಳು ಶೇಕಡಾ 2690 ಲಾಭ ನೀಡಿವೆ. ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್ ಷೇರುಗಳ ಬೆಲೆ 24 ಜನವರಿ 2014 ರಂದು 13.20 ರೂಪಾಯಿ ಇದ್ದುದು 25 ಜನವರಿ 2024 ರಂದು 367.90 ರೂಪಾಯಿಗೆ ಏರಿದೆ. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ 410.05 ರೂ. ಹಾಗೂ ಕನಿಷ್ಠ ಬೆಲೆ 224.20 ರೂಪಾಯಿ.
ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್ ಲಿಮಿಟೆಡ್, ಪ್ರಧಾನವಾಗಿ ಕೃಷಿ-ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿದ್ದು, ರಫ್ತು ಮತ್ತು ಸ್ಥಳೀಯ ಮಾರುಕಟ್ಟೆಯ ಮೇಲೆ ಕೇಂದ್ರೀಕರಿಸಿದೆ, ಆಹಾರ, ಔಷಧೀಯ ಉದ್ಯಮದಲ್ಲಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ.


ಐಪಿಒ ತೆರೆಯುವ ಮೊದಲೇ ಗ್ರೇ ಮಾರುಕಟ್ಟೆಯಲ್ಲಿ 50% ಹೆಚ್ಚಳ: ಮೊದಲ ದಿನವೇ ಹೂಡಿಕೆ ಹಣ ದುಪ್ಪಟ್ಟಾಗುವ ನಿರೀಕ್ಷೆ

ಹೊಸ ಷೇರುಗಳಾಗಿ ಪರಿವರ್ತಿತವಾಗಲಿವೆ 13,50,00,000 ವಾರಂಟ್​: ಪೆನ್ನಿ ಸ್ಟಾಕ್​ಗೆ ಈಗ ಡಿಮ್ಯಾಂಡು…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
