ನವದೆಹಲಿ:ಪ್ರತಿಷ್ಠಿತ ರಿಲಯನ್ಸ್ ಜಿಯೋ ಕಂಪನಿಯ 41 ಸಾವಿರ ಉದ್ಯೋಗಿಗಳು ರಾಜೀನಾಮೆ ನೀಡಿದ್ದು, ಸಂಸ್ಥೆಯಲ್ಲಿ ಕೆಲಸ ಬಿಡುವವರ ಪ್ರಮಾಣವೂ ಹೆಚ್ಚಳಗೊಂಡಿದೆ. ಕಂಪನಿಯ ವಾರ್ಷಿಕ ವರದಿಯಿಂದಾಗಿ ಈ ಅಂಶ ಬಹಿರಂಗಗೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್​ಐಎಲ್​) ಸಂಸ್ಥೆಯಿಂದ ಸ್ವಯಂಪ್ರೇರಿತರಾಗಿ ಕೆಲಸ ಬಿಡುತ್ತಿರುವವ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಉಂಟಾಗಿದ್ದು, ಸಂಸ್ಥೆಯ ರಿಟೇಲ್ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ 2022-23ರ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.
ಅದರಲ್ಲೂ ರಿಲಯನ್ಸ್ ಜಿಯೋದಿಂದ 41 ಸಾವಿರ ಉದ್ಯೋಗಿಗಳು ಹಾಗೂ ರಿಲಯನ್ಸ್ ರಿಟೇಲ್ಸ್​ನಿಂದ 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಇನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೆಲಸ ಬಿಡುವವರ ಪ್ರಮಾಣದಲ್ಲಿ ಶೇ. 64.8 ಹೆಚ್ಚಳಗೊಂಡಿದೆ.
ಇದನ್ನೂ ಓದಿ:ಹೃದಯಾಘಾತಕ್ಕೆ ಮತ್ತೊಂದು ಬಲಿ: 15 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು
ಆರ್​​ಐಎಲ್​ ರಿಟೇಲ್​ ವಿಭಾಗದಲ್ಲಿ ಹಲವಾರು ಸ್ವಾಧೀನಗಳನ್ನು ಮಾಡಿದ್ದರಿಂದ ಕಾರ್ಯಗಳ ಅತಿಕ್ರಮಣಕ್ಕೆ ಕಾರಣವಾಯಿತು. ಕೆಲವು ಕೆಲಸಗಾರರು ಇತರ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರೆ, ಇನ್ನು ಕೆಲವರು ನೇಮಕಾತಿ ಉತ್ತುಂಗದ ಸಮಯದಲ್ಲಿ ಇತರ ಕೈಗಾರಿಕೆಗಳಿಗೆ ಸೇರಲು ಸಂಸ್ಥೆಯನ್ನು ತೊರೆದರು ಎಂಬುದಾಗಿ ಕಂಪನಿಯು ಕಾರಣವನ್ನು ತಿಳಿಸಿದೆ.
2022-23ನೇ ಸಾಲಿನಲ್ಲಿ ಒಟ್ಟಾರೆಯಾಗಿ 1,67,391 ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ. ಆ ಪೈಕಿ ರಿಟೇಲ್​ ಕ್ಷೇತ್ರದಿಂದ 1,19,229 ಮತ್ತು ಜಿಯೋದಿಂದ 41,818 ಜನರು ಉದ್ಯೋಗವನ್ನು ತೊರೆದಿದ್ದಾರೆ. ಅದಾಗ್ಯೂ ಆರ್​​ಐಎಲ್​ ಹೊಸ ನೇಮಕಾತಿಯಲ್ಲಿ ತೊಡಗಿದೆ. ಪ್ರಸಕ್ತ ವರ್ಷದಲ್ಲಿ ತನ್ನ ವಿವಿಧ ವ್ಯವಹಾರಗಳಲ್ಲಿ ಕಂಪನಿಯು 2,62,558 ಉದ್ಯೋಗಿಗಳನ್ನು ನೇಮಕ ಮಾಡಿದೆ. –ಏಜೆನ್ಸೀಸ್
ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

ಕಳವಾದ ಮೊಬೈಲ್‌ಫೋನ್ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
