ಮಂಗಳೂರು:ಭಾನುವಾರ ತಡರಾತ್ರಿ ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್​ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ 17 ಎಮ್ಮೆಗಳು ಸೇರಿದಂತೆ 20 ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಕಂಕನಾಡಿ ಕಡೆಯಿಂದ ಮಂಗಳೂರು ಕೆಮಿಕಲ್ಸ್​ ಅಂಡ್ ಫರ್ಟಿಲೈಸರ್ಸ್​ ಕಡೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಒಬ್ಬರು ತೋಕೂರಿನಿಂದ ಕೇರಳದ ಪಣಂಬೂರಿಗೆ ಸರಕು ಸಾಗಾಣೆ ರೈಲಿನ ಹಳಿ ಇದೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಗೂಡ್ಸ್​ ರೈಲು ಸಾಗುವಾಗ ಹಾರ್ನ್​ ಹೊಡೆಯುತ್ತಾರೆ.
ಬಹುಶಃ ಎಮ್ಮೆಗಳು ರೈಲ್ಚೆ ಹಳಿ ಮೇಲೆ ಮಲಗಿದ್ದ ಸಮಯದಲ್ಲಿ ರೈಲು ಹಾದು ಹೋಗಿರಬಹುದು. 2021ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗ 13 ಎಮ್ಮೆಗಳು ಸತ್ತಿದ್ದವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!
ಶನಿವಾರ ಈ ಪ್ರದೇಶದಲ್ಲಿ ಬಾರಿ ಮಳೆಯಾದ ಕಾರಣ ರೈಲ್ವೆ ಹಳಿ ಬಳಿ ಕೆಸರು ನಿಂತಿತ್ತು. ಎಮ್ಮೆಗಳು ಹೆಚ್ಚಾಗಿ ಕೆಸರಿನ ಬಳಿ ಹೆಚ್ಚಾಗಿ ಮಲಗುತ್ತವೆ. ರೈಲು ಹಾರ್ನ್​ ಹೊಡೆಯುತ್ತಾ ಬಂದರೂ ಸಹ ಎಮ್ಮೆಗಳು ಮೇಲೇಳುವುದಿಲ್ಲ ಆಗ ಈ ಘಟನೆ ನಡೆದಿರಬಹುದು ಎಂದು ರೈಲ್ಷೆ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಎಮ್ಮೆ ಹಾಗೂ ಜಾನುವಾರುಗಳ ಮೃತದೇಹಗಳನ್ನು ಹೊರತೆಗೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
