ಬೆಂಗಳೂರು:ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾ ಸೋಂಕು ಮಾಡುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಸೋಂಕು ಎಗ್ಗಿಲ್ಲದೇ ಹರಡುತ್ತಲೇ ಇದೆ.
ಈ ನಡುವೆಯೇ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ 17 ದಿನಗಳ ಕಂದಮ್ಮನಿಗೂ ಸೋಂಕು ತಗುಲಿದ್ದು ಅದು ಮೃತಪಟ್ಟಿದೆ. ದುರದೃಷ್ಟ ಎಂದರೆ ಈ ಮಗುವಿನ ಅಪ್ಪ-ಅಮ್ಮನಿಗೂ ಸೋಂಕು ತಗುಲಿರುವ ಕಾರಣ, ಅಂತ್ಯಸಂಸ್ಕಾರಕ್ಕೂ ಬರಲಾರದಂಥ ಸ್ಥಿತಿ! ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಮಗುವಿನ ಅಂತ್ಯಕ್ರಿಯೆಗೆ ಬರಲು ಅವಕಾಶವಿರಲಿಲ್ಲ.
ಇದನ್ನೂ ಓದಿ:ವಿದ್ಯುತ್​ಗೂ ತಗುಲಿದ ‘ಕರೊನಾ ಸೋಂಕು’
ಮಗು ಹುಟ್ಟುವಾಗಲೇ ಅಮ್ಮನಿಗೂ ಸೋಂಕು ತಗುಲಿದ್ದರಿಂದ ಅಮ್ಮನಿಂದಲೂ ದೂರಮಾಡಲಾಗಿತ್ತು. ಅಪ್ಪನಿಗೂ ಸೋಂಕು ಇದ್ದುದರಿಂದ ಅಪ್ಪನೂ ಮಗುವಿನ ಸಂಪರ್ಕಕ್ಕೆ ಬರುವಂತಿರಲಿಲ್ಲ. ತಾಯಿಯ ಹಾಲಿನ ಬದಲು ಔಷಧಿಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು.
ಈ ಮಗು ಮೃತಪಟ್ಟಿರುವ ಕಾರಣ, ವೈದ್ಯರೇ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮುದ್ದು ಮುದ್ದಾಗಿರುವ ಪುಟ್ಟ ಕಂದನ ಅಂತ್ಯಸಂಸ್ಕಾರ ಮಾಡುವಾಗಿ ವೈದ್ಯಕೀಯ ಸಿಬ್ಬಂದಿ ಕಣ್ಣೀರಾಗಿದ್ದಾರೆ. ಕರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕವರ್‌ನಲ್ಲಿ ಸುತ್ತಿಕೊಂಡು ಪಾಲಕರೂ ಇಲ್ಲದೇ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.
ಕೋವಿಡ್​ನಿಂದ ಸತ್ತವನ ಹೆಣ ಕೊಡಲೇಬೇಕೆಂದು ಸರ್ಕಾರಿ ಸಿಬ್ಬಂದಿಯನ್ನೇ ಅಪಹರಿಸಿದ್ರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
