ರಾಂಚಿ:ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್‌ನಿಂದ ಮರಳಿದ ಮೇಲೆ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ 17 ವಿದೇಶಿ ತಬ್ಲಿಘಿ ಸದಸ್ಯರ ಬಿಡುಗಡೆಗೆ ಜಾರ್ಖಂಡ್‌ನ ನ್ಯಾಯಾಲಯ ಇದೀಗ ಆದೇಶಿಸಿದೆ.
ಈ 17 ಮಂದಿಯ ಮೂರು ತಿಂಗಳ ನ್ಯಾಯಾಂಗ ಕಸ್ಟಡಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರವರ ತಾಯ್ನಾಡಿಗೆ ಮರಳಲು ರಾಂಚಿಯ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನೀಡಿದೆ. ಇವರೆಲ್ಲರಿಗೂ ತಲಾ 2,200 ರೂಪಾಯಿ ದಂಡವನ್ನೂ ವಿಧಿಸಿದೆ. ತಮ್ಮ ಕೃತ್ಯದಿಂದ ಕರೊನಾ ವ್ಯಾಧಿ ಹರಡುವ ಸಾಧ್ಯತೆಯಿತ್ತು ಎಂದು ಈ 17 ಜನರು ತಪ್ಪನ್ನು ಭಾಗಶಃ ಒಪ್ಪಿಕೊಂಡಿದ್ದರು.
ರಾಂಚಿಯ ಹಿಂದ್‌ಪಿರಿ ಪ್ರದೇಶದ ಮಸೀದಿಯಲ್ಲಿ ಅಡಗಿದ್ದವರನ್ನು ಮಾರ್ಚ್ 30ರಂದು ಬಂಧಿಸಲಾಗಿತ್ತು. ಜುಲೈ 15ಕ್ಕೆ ಇವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತ್ತು. ಈ 17 ಜನರು ಮಲೇಷ್ಯಾ, ಬ್ರಿಟನ್, ನೆದರ್‌ಲೆಂಡ್ಸ್, ಜಾಂಬಿಯಾ ಮತ್ತು ಕೆರಿಬಿಯನ್ ಐಲ್ಯಾಂಡ್ ದೇಶಗಳ ಪ್ರಜೆಗಳು. ಈ ಪೈಕಿ ಮಲೇಷ್ಯಾದ ಒಬ್ಬ ಮಹಿಳೆಗೆ ಕರೊನಾ ಸೋಂಕು ತಗುಲಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
