ಚಂಡೀಗಢ:ಕರೊನಾ ವೈರಸ್​ ಹಾವಳಿಯಿಂದಾಗಿ ಈಗ ಬಹುತೇಕ ಶಾಲೆಗಳಲ್ಲಿ ಆನ್​ಲೈನ್​ ಶಿಕ್ಷಣ ಆರಂಭವಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳಿಗೆ ಅವರು ಹೋಗುವಂತಿಲ್ಲ. ಈ ಹಿನ್ನೆಲೆಯಲ್ಲಿ, ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿಕೊಳ್ಳುತ್ತಿರುವ ಶಾಲೆಗಳು ಆನ್​ಲೈನ್​ ಮೂಲಕ ತರಬೇತಿ ನೀಡಲು ಶುರು ಮಾಡಿದೆ.
ಆದರೆ, ಅದೆಷ್ಟೋ ಮಕ್ಕಳ ಬಳಿ ಸ್ಮಾರ್ಟ್​ಫೋನ್​ಗಳೇ ಇಲ್ಲ. ಇದ್ದರೂ ಆನ್​ಲೈನ್​ ಕ್ಲಾಸ್​ಗೆ ಯೋಗ್ಯವಾಗುವಂಥ ಫೋನ್​ಗಳು ಲಭ್ಯವಿರುವುದಿಲ್ಲ. ಅದೇ ಇನ್ನೊಂದೆಡೆ, ಪಾಲಕರ ಬಳಿ ಫೋನ್​ ಇದ್ದರೂ ಅದನ್ನು ಅವರು ಕೊಂಡೊಯ್ಯುವ ಕಾರಣದಿಂದ ಮಕ್ಕಳಿಗೆ ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ ಕೊಡಿಸುವುದು ಅನಿವಾರ್ಯವಾಗಿಬಿಟ್ಟಿದೆ. ಆದರೆ ಮಕ್ಕಳಿಗೆ ಫೋನ್​ ಕೊಡಿಸಲು ಸಾಧ್ಯವಾಗದ ಅದೆಷ್ಟೋ ಪಾಲಕರು ಇದೀಗ ಚಿಂತೆ ಮಾಡುವಂತಾಗಿದೆ.
ಇದನ್ನೂ ಓದಿ:ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!
ಇದೇ ಕಾರಣಕ್ಕೆ ಕಳೆದ ವಾರವಷ್ಟೇ ಕೇರಳದ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಲ್ಲಿ ಟಿವಿ ಹಾಗೂ ಸ್ಮಾರ್ಟ್​ಫೋನ್‌ಗಳ ಮೂಲಕ ಆನ್‌ಲೈನ್‌ ಕ್ಲಾಸ್‌ಗಳು ನಡೆಯುತ್ತಿದೆ. ಆದರೆ ಮನೆಯಲ್ಲಿ ಟಿವಿಯಾಗಲೀ, ಸ್ಮಾರ್ಟ್‌ ಫೋನ್ ಆಗಲೀ ಇಲ್ಲದ ಕಾರಣ ಕ್ಲಾಸ್​ ಮಿಸ್​ ಆಗುತ್ತದೆ ಎಂದು ಆತಂಕಗೊಂಡಿದ್ದ 14 ವರ್ಷದ ದೇವಿಕಾ ಬಾಲಕೃಷ್ಣನ್‌ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ಇಂಥದ್ದೇ ಒಂದು ಘಟನೆ ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ ನಡೆದಿದೆ. ಈಕೆ 11ನೇ ತರಗತಿ ವಿದ್ಯಾರ್ಥಿನಿ. ಕೂಲಿ ಕಾರ್ಮಿಕರೊಬ್ಬರ ಮಗಳಾಗಿರುವ ಈಕೆಯ ಬಳಿ ಸ್ಮಾರ್ಟ್​ಫೋನ್​ ಇರಲಿಲ್ಲ.
ಇದನ್ನೂ ಓದಿ:ತೆಲಂಗಾಣದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದು: ಎಲ್ಲರೂ ಪಾಸ್​ ಎಂದ ಸರ್ಕಾರ
ಆನ್​ಲೈನ್​ ತರಗತಿ ನಡೆಯುತ್ತಿದ್ದ ಕಾರಣ, ಸ್ಮಾರ್ಟ್​ಫೋನ್​ ಕೊಡಿಸುವಂತೆ ಅಪ್ಪನನ್ನು ಕೇಳಿದ್ದಳು. ಆದರೆ ಅಷ್ಟು ದುಬಾರಿ ಬೆಲೆಯನ್ನು ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಇನ್ನು ತನಗೆ ಫೋನ್​ ಸಿಗುವುದಿಲ್ಲ, ಕ್ಲಾಸ್​ಗಳು ಮಿಸ್​ ಆಗುತ್ತವೆ ಎಂದು ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!
ಇದೇ ರೀತಿ ಕಳೆದ ತಿಂಗಳು ತಮ್ಮ ಮಕ್ಕಳಿಗೆ ಸ್ಮಾರ್ಟ್​ಫೋನ್​ ಕೊಡಿಸಲಿಲ್ಲ ಎಂದು ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.(ಏಜೆನ್ಸೀಸ್​)
ಪರೀಕ್ಷೆಗೆ ಹೋದ ವಿದ್ಯಾರ್ಥಿನಿಯ ಶವ ನದಿಯಲ್ಲಿ! ಸಾವಿನ ಹಿಂದೆ ನೂರೊಂದು ಪ್ರಶ್ನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 4 =
Remember me
