ಸೂರತ್​​:ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದಾಗಿ ಸಾಯುವವರ ಸಂಖ್ಯೆಯೂ ಅಧಿಕವಾಗಿದೆ. ಶಾಲೆಯಲ್ಲಿ ಮೆಟ್ಟಿಲು ಹತ್ತುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಇದ್ದಕ್ಕಿದಂತೆ ಮೃತಪಟ್ಟ ದಾರುಣ ಘಟನೆ ಗುಜರಾತ್​ ಸೂರತ್​ ಬಳಿ ನಡೆದಿದೆ.ತನಿಶಾ ಗಾಂಧಿ(17) ಮೃತ ವಿದ್ಯಾರ್ಥಿನಿಯಾಗಿದ್ದು, ಸೂರತ್​ ಬಳಿಯ ಎಬಿ ಕಾಲೇಜಿನಲ್ಲಿ 12ನೇ ತರಗತಿಯನ್ನು ಓದುತ್ತಿದ್ದಳು. ಎರಡು ವರ್ಷಗಳ ಹಿಂದೆ ಕೋವಿಡ್​ನಿಂದಾಗಿ ತನ್ನ ತಾಯಿಯನ್ನು ತನಿಶಾ ಕಳೆದುಕೊಂಡಿದ್ದಳು.ಇದನ್ನೂ ಓದಿ: VIDEO| ರೀಲ್ಸ್​ಗಾಗಿ ನದಿ ತೀರದಲ್ಲಿ ಡ್ಯಾನ್ಸ್​​ ಮಾಡಿ ಪೊಲೀಸರ ಅತಿಥಿಯಾದ ಯುವತಿಸೋಮವಾರದಂದು ಕಾಲೇಜಿನ ಬಿಡುವಿನ ಅವಧಿಯಲ್ಲಿ ತನ್ನ ಸ್ನೇಹಿತೆಯರೊಂದಿಗೆ ಮೆಟ್ಟಿಲು ಹತ್ತುತ್ತಿದ್ದ ತನಿಶಾ ಇದ್ದಕ್ಕಿದ್ದಂತೆ ಜೋರಾಗಿ ಉಸಿರಾಟವನ್ನು ಪ್ರಾರಂಭಿಸಿ, ವಿಪರೀತವಾಗಿ ಬೆವರಲು ಪ್ರಾರಂಭಿಸಿ ಮೆಟ್ಟಿಲುಗಳ ಕಬ್ಬಿಣದ ರಾಡ್​ನ್ನು ಹಿಡಿಯಲು ಯತ್ನಿಸಿ ವಿಫಲವಾಗಿದ್ದಾಳೆ.ಈ ವೇಳೆ ಆಕೆಯ ಸಹಾಯಕ್ಕೆ ಧಾವಿಸಿದ ಸ್ನೇಹಿತೆಯರು ಕೂಡಲೇ ಕಾಲೇಜಿನ ಸಿಬ್ಬಂದಿಗೆ ಸುದ್ದಿ ತಲುಪಿಸಿ, ನಿಧಾನವಾಗಿ ಆಕೆಯನ್ನು ಕರೆದುಕೊಂಡು ಕೆಳಗೆ ಬಂದಿದ್ದಾರೆ. ಕಾಲೇಜಿನ ವಾಹನದಲ್ಲಿಯೇ ತನಿಶಾಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ನೀಟ್​ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ತನಿಶಾ ವೈದ್ಯಳಾಗಲು ಬಯಸಿದ್ದಳು. ಆದರೆ ವಿಧಿ ಆಕೆಯ ಬಾಳಲ್ಲಿ ಆಟವಾಡಿದ್ದು, ಮಗಳನ್ನು ಕಳೆದುಕೊಂಡ ಆಕೆಯ ತಂದೆಯ ಆಕ್ರಂದನ ಮುಗಿಲುಮುಟ್ಟುವಂತಿತ್ತು. ಕಳೆದ ನಾಲ್ಕು ತಿಂಗಳುಗಳಲ್ಲಿ, ಸೂರತ್ ಮತ್ತು ದಕ್ಷಿಣ ಗುಜರಾತ್‌ನಲ್ಲಿ 12ಕ್ಕೂ ಹೆಚ್ಚು ಹೃದಯಾಘಾತ ಸಂಬಂಧಿ ಸಾವುಗಳು ವರದಿಯಾಗಿವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 6 =
Remember me
