ವಿಶಾಖಪಟ್ಟಣಂ:ಸೋದರ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಬಿಜಿಯಾಗಿದ್ದ 17 ವರ್ಷದ ಹುಡುಗಿಯೊಬ್ಬಳ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣ (ವೈಜಾಗ್​)ದಲ್ಲಿ ನಡೆದಿದೆ.
ವರಲಕ್ಷ್ಮೀ ಮೃತ ದುರ್ದೈವಿ. ಮದುವೆ ಸಮಾರಂಭ ಹಿನ್ನೆಲೆಯಲ್ಲಿ ವೈಜಾಗ್​ ಉಪನಗರದಲ್ಲಿರುವ ತಮ್ಮ ಮನೆಯ ಸಮೀಪದಲ್ಲೇ ಇದ್ದ ಸಂಬಂಧಿಕರ ಮನೆಗೆ ಬಂದಿದ್ದಳು. ಎರಡು ಮನೆ ಹತ್ತಿರದಲ್ಲಿದ್ದರಿಂದ ಅತ್ತಿಂದಿತ್ತ ಓಡಾಡುವುದು ಸಾಮಾನ್ಯವಾಗಿತ್ತು. ಹೀಗಿರುವಾಗ ಶನಿವಾರ ಸಂಜೆ ಆಕೆ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ಎಲ್ಲೋ ಮಾರ್ಗ ಮಧ್ಯೆ ಸಿಲುಕಿರಬೇಕೆಂದುಕೊಳ್ಳುವ ಮನೆಯವರು ತೀವ್ರ ಹುಡುಕಾಟ ನಡೆಸಿದ ಬಳಿಕ ಹತ್ತಿರದ ದೇವಸ್ಥಾನವೊಂದರಲ್ಲಿ ಆಕೆಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ.
ಕೊಲೆ ಎಂದು ಶಂಕಿಸಲಾಗಿದ್ದು, ವರಲಕ್ಷ್ಮೀ ಮತ್ತು ಆಕೆಯ ಕುಟುಂಬಕ್ಕೆ ಪರಿಚಯವಿದ್ದ ಅಖಿಲ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ಗಜುವಾಕಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಶ್ರೀನಗರ ಗುಡ್ಡಗಾಡು ಪ್ರದೇಶದ ನಿವಾಸಿ ವರಲಕ್ಷ್ಮೀ ಕೊಲೆಯಾಗಿದೆ. ಅಖಿಲ್​ ಎಂಬ ಶಂಕಿತನನ್ನು ಬಂಧಿಸಲಾಗಿದೆ. ತನಿಖೆಯ ಪ್ರಾಥಮಿಕ ಹಂತದ ವರದಿ ಇನ್ನು ಬಿಡುಗಡೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಶನಿವಾರ ನಡೆದ ಘಟನೆ ಬಗ್ಗೆ ವರಲಕ್ಷ್ಮೀ ಸಹೋದರ ವಿವರಣೆ ನೀಡಿದ್ದಾರೆ. ನಾನು ಮತ್ತು ವರಲಕ್ಷ್ಮೀ ಸ್ವಲ್ಪ ಹೊತ್ತಿನ ಮಟ್ಟಿಗೆ ಮನೆಗೆ ಮರಳಿದ್ದೆವು. ಮತ್ತೆ ಮದುವೆ ಮಂಟಪಕ್ಕೆ ಹೋಗುವ ಮುನ್ನ ಬಟ್ಟೆ ಬದಲಾಯಿಸಿಕೊಂಡ ವರಲಕ್ಷ್ಮೀ ಮೆಹಂದಿ ಸಹ ಹಾಕಿಕೊಂಡಿದ್ದಳು. ಇದರ ನಡುವೆ ನಾನು ವಾಶ್​ರೂಮ್​ಗೆ ತೆರಳಿದೆ. ಮತ್ತೆ ಬಂದು ನೋಡುವಷ್ಟರಲ್ಲಿ ವರಲಕ್ಷ್ಮೀ ಇರಲಿಲ್ಲ. ಮದುವೆ ಮನೆಗೆ ಹೋಗಿರಬಹುದೆಂದು ಅಂದುಕೊಂಡೆ. ಆದರೆ, ಅಲ್ಲಿಗೂ ಆಕೆ ತಲುಪಿಲ್ಲ ಎಂದು ಗೊತ್ತಾಯಿತು. ಇದಾದ ಬಳಿಕ ಹುಡುಕಾಡಲು ಶುರು ಮಾಡಿದೆ. ಅಷ್ಟರಲ್ಲಾಗಲೇ ನನ್ನ ತಂದೆಯು ಸಹ ಬಂದರು. ಇಬ್ಬರು ಜತೆಗೂಡಿ ಹುಡುಕಾಡಲು ಆರಂಭಿಸಿದೆವು ಎಂದು ಸಹೋದರ ಹೇಳಿದ್ದಾರೆ.
ಇದನ್ನೂ ಓದಿ:ಖಾತ್ರಿ ಮಾನವ ದಿನಗಳನ್ನು ಹೆಚ್ಚಿಸಲು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಒತ್ತಾಯ
ಅಖಿಲ್​ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿರುವ ಸಹೋದರ, ವರಲಕ್ಷ್ಮೀ ಮತ್ತು ಅಖಿಲ್​ ಪ್ರೀತಿಸುತ್ತಿದ್ದರು. ಅಖಿಲ್​ ಆಕೆಗಿಂತ ಮೂರರಿಂದ ನಾಲ್ಕು ವರ್ಷ ದೊಡ್ಡವನು. ಶಾಲಾ ದಿನಗಳಿಂದ ಪರಿಚಯವಿದ್ದನು. ಹಿಂದಿನಿಂದಲೂ ಹಿಂಬಾಲಿಸುವುದು ಮತ್ತು ಕಿರುಕುಳ ನೀಡುತ್ತಿದ್ದನು. ಆಗಾಗ ಮನೆ ಹತ್ತಿರದ ದೇವಸ್ಥಾನಕ್ಕೆ ಬರುತ್ತಿದ್ದನು. ಹೀಗಾಗಿ ವರಲಕ್ಷ್ಮೀ ಹುಡುಕಿಕೊಂಡು ಸಹೋದರ ಅಲ್ಲಿಗೆ ಹೋಗಿದ್ದಾನೆ. ಬಳಿಕ ಅಲ್ಲಿದ್ದವರನ್ನು ಕೇಳಿದ್ದಾನೆ. ಆದರೆ, ಯಾರೊಬ್ಬರು ಆಕೆಯ ಬಗ್ಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಅಖಿಲ್​​ ರಕ್ತದ ಕಲೆಗಳಿದ್ದ ಬಟ್ಟೆಯೊಂದಿಗೆ ಪರಾರಿಯಾಗಿದ್ದು ಸಹೋದರನ ಕಣ್ಣಿಗೆ ಬಿದ್ದಿದೆ. ಬಳಿಕ ಸಹೋದರಿಯ ಹೆಸರಿಡಿದು ಕೂಗಿದಾಗ ಆಕೆಯ ಪ್ರತಿಕ್ರಿಯೆ ಬರದಿದ್ದನ್ನು ನೋಡಿ, ಅಖಿಲ್​ ಮನೆಗೆ ಓಡಿದ್ದಾನೆ. ಮಾರ್ಗಮಧ್ಯೆದಲ್ಲಿದ್ದ ಜನರು ದೇವಸ್ಥಾನದ ಕಡೆಗೆ ಓರ್ವ ವ್ಯಕ್ತಿ ಮತ್ತು ಪೊಲೀಸರು ತೆರಳಿದ್ದಾಗಿ ವರಲಕ್ಷ್ಮೀ ಸಹೋದರನಿಗೆ ಹೇಳಿದ್ದಾರೆ. ಅದನ್ನು ಕೇಳಿ ಮತ್ತೆ ದೇವಸ್ಥಾನಕ್ಕೆ ಹೋದಾಗ ಗೋಡೆಯ ಹಿಂಬಂದಿಯ ಪೊದೆಯಲ್ಲಿ ವರಲಕ್ಷ್ಮೀ ಶವ ಪತ್ತೆಯಾಗಿದೆ.
ಇನ್ನು ಅಖಿಲ್ ರಕ್ತದ ಕಲೆಗಳೊಂದಿಗೆ ನೇರವಾಗಿ ತನ್ನ ಮನೆಗೆ ಹೋಗಿ ಕೊಲೆ ಮಾಡಿದ್ದನ್ನು ತಂದೆಯ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನ ತಂದೆಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಖಿಲ್​ನನ್ನು ಬಂಧಿಸಿದ್ದಾರೆ. ಬಳಿಕ ಆತನೊಂದಿಗೆ ತೆರಳಿ ಶವವನ್ನು ಸಹ ಪತ್ತೆಹಚ್ಚಿದ್ದಾರೆ. ಪ್ರೀತಿಯ ಪ್ರಸ್ತಾವನೆ ಒಪ್ಪದಿದ್ದಕ್ಕೆ ಕೊಲೆಯಾಗಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ವಿರುದ್ಧ ಎಫ್​ಐಆರ್​; ಒಂದು ಪ್ರಶ್ನೆ ಸೃಷ್ಟಿಸಿದ ವಿವಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 7 =
Remember me
