ವಾರಣಾಸಿ:ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೋಮುಸೌಹಾರ್ದದ ಬೆಳವಣಿಗೆಯೊಂದು ನಡೆದಿದೆ. ಅಂದರೆ ಕಾಶಿ ದೇವಸ್ಥಾನಕ್ಕೆ ಜ್ಞಾನವ್ಯಾಪಿ ಮಸೀದಿಯಿಂದ 1,700 ಚದರಡಿ ಸ್ಥಳವನ್ನು ವರ್ಗಾಯಿಸಲಾಗಿದೆ. ದೇವಸ್ಥಾನದ ಕಾರಿಡಾರ್​ಗಾಗಿ ಮಸೀದಿಗೆ ಹೊಂದಿಕೊಂಡಂತಿರುವ ಈ ಸ್ಥಳವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್​ಗೆ ಒಪ್ಪಿಸಲಾಗಿದೆ.
ಈ ಸ್ಥಳಕ್ಕೆ ಸಂಬಂಧಿತ ವಿಚಾರ ನ್ಯಾಯಾಲಯದಿದ್ದರೂ ಹೀಗೆ ಸೌಹಾರ್ದಯುತವಾಗಿ ಸ್ಥಳ ವರ್ಗಾವಣೆ ನಡೆದಿದೆ. ಪ್ರಕರಣ ಇನ್ನೂ ಕೋರ್ಟ್​ನಲ್ಲಿದೆ. ಸರ್ಕಾರ ಕಾರಿಡಾರ್ ನಿರ್ಮಿಸುತ್ತಿದ್ದು, ಅದಕ್ಕಾಗಿ ಜಾಗ ಒತ್ತುವರಿ ಮಾಡಿಕೊಳ್ಳಬೇಕಿದೆ. ಹೀಗಾಗಿ ನಾವು ನಮ್ಮವರೊಂದಿಗೆ ಚರ್ಚಿಸಿದ್ದು, ನಮ್ಮ ಆಡಳಿತ ಮಂಡಳಿ 1,700 ಚದರಡಿ ಜಾಗ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್​​ಗಾಗಿ ಕೊಡಲು ಸಮ್ಮತಿ ಸೂಚಿಸಿದೆ ಎಂಬುದಾಗಿ ಅಂಜುಮಾನ್​ ಇಂತಜಾಮಿಯಾ ಮಸೀದಿಯ ಜಂಟಿ ಕಾರ್ಯದರ್ಶಿ ಎಸ್​.ಎಂ. ಯಾಸಿನ್​ ತಿಳಿಸಿದ್ದಾರೆ.
ಇನ್ನು ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಮಸೀದಿಯ ಜಾಗವನ್ನು ಕೊಟ್ಟಿರುವುದಕ್ಕೆ ಪ್ರತಿಯಾಗಿ ದೇವಸ್ಥಾನವೂ ಒಂದಷ್ಟು ಜಾಗವನ್ನು ಕೊಟ್ಟಿದೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ದೇವಸ್ಥಾನಕ್ಕೆ ಸೇರಿದ 1,000 ಚದರಡಿ ಜಾಗವನ್ನು ಮಸೀದಿಗೆ ಕೊಡಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
