ಬೆಂಗಳೂರು:ಮಹಾಮಾರಿ ಕರೊನಾ ವೈರಸ್​ ಮಣಿಸಲು ದೇಹದ ಇಮ್ಯುನಿಟಿ ಶಕ್ತಿಯೇ ಪ್ರಮುಖ ಸಾಧನ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದ ಕೆಲವರಿಗೆ ಕರೊನಾ ವೈರಸ್​ ಬಂದು ಹೋಗುವುದು ಗೊತ್ತಾಗುವುದಿಲ್ಲ ಎಂದು ಈ ಹಿಂದೆ ತಜ್ಞರು ಹೇಳಿದ ಮಾತಿಗೆ ನೂತನ ವರದಿಯೊಂದು ಪುಷ್ಟಿ ನೀಡಿದೆ.
ಇದನ್ನೂ ಓದಿ:ಲಿಫ್ಟ್​ನಲ್ಲಿ ಸಿಲುಕಿ ಮೂತ್ರ ಕುಡಿದೇ 3 ದಿನ ವನವಾಸ ಅನುಭವಿಸಿದ ಅಮ್ಮ-ಮಗಳಿಗೆ 4ನೇ ದಿನ ಕಾದಿತ್ತು ಅಚ್ಚರಿ!
ಈಗಾಗಲೇ ಕೆಲವರು ಆ್ಯಂಟಿಬಾಡಿ ಬೆಳೆಸಿಕೊಂಡು ಕರೊನಾ ವಿರುದ್ಧ ಸೆಣಸಿದ್ದಾರೆ ಎಂಬುದು ಥೈರೋಕೇರ್ ಲ್ಯಾಬೋರೇಟರಿ​ ಹೆಸರಿನ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಸಂಸ್ಥೆಯು ಆ್ಯಂಟಿಬಾಡಿ ಟೆಸ್ಟ್​ ನಡೆಸಿದ್ದು, ಇದರಲ್ಲಿ ರಾಜ್ಯಕ್ಕೆ ಗುಡ್​ನ್ಯೂಸ್​ ಸಿಕ್ಕಿದೆ. ದೇಶಾದ್ಯಂತ ಸುಮಾರು 600 ಏರಿಯಾಗಳಲ್ಲಿ 60 ಸಾವಿರ ಪರೀಕ್ಷೆಗಳನ್ನು ಥೈರೋಕೇರ್​ ಸಂಸ್ಥೆ ನಡೆಸಿದೆ.
ಅಧ್ಯಯನ ಪ್ರಕಾರ ದೇಶದಲ್ಲಿ ಈಗಾಗಲೇ 15% ಮಂದಿಗೆ ಕರೊನಾ ಬಂದು ಹೋಗಿದೆ. ಅಂದರೆ ದೇಶದ 18 ಕೋಟಿ ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಬೆಳೆದಿದೆ ಎನ್ನುತ್ತಿದೆ ಥೈರೋಕೇರ್ ಲ್ಯಾಬೋರೇಟರಿಯ ಅಂಕಿ-ಅಂಶಗಳು.
ಇದನ್ನೂ ಓದಿ:ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ಯುವಕ ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಸರ್ ಕುಡಿದ..!
ಈಗಾಗಲೇ ಕರೊನಾ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಕರೊನಾ ಬಂದು ಹೋಗಿದೆ. ಇಲ್ಲಿ ನಡೆಸಿದ ಆ್ಯಂಟಿಬಾಡಿ ಟೆಸ್ಟ್​ನಲ್ಲಿ ಶೇ.44 ಮಂದಿಯಲ್ಲಿ ಕರೊನಾ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಬಳ್ಳಾರಿಯಲ್ಲೂ ಶೇ. 24 ಮಂದಿಗೆ ಕರೊನಾ ಈಗಾಗಲೇ ಬಂದು ಹೋಗಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಆ್ಯಂಟಿಬಾಡಿ ಬೆಳೆದಿದೆ ಎನ್ನುತ್ತಿದೆ ಈ ಅಧ್ಯಯನ.
#AntibodyTesting. Delhi and Karnataka. Cut off 50 reported. Pincode wise positivity.https://t.co/Hd7hFIdv7qpic.twitter.com/aiqCudOfVz
— Dr. A. Velumani.PhD. (@velumania)July 17, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 16 =
Remember me
