ಐಜ್ವಾಲ್, ಮಿಜೋರಾಂ:ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 18 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆರಾಯಿನ್ ಮತ್ತು 1.21 ಕೋಟಿ ರೂ. ನಗದು ವಶಪಡಿಸಿಕೊಂಡ ಬೆನ್ನಲ್ಲೇ ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ ಐವರು ಮೈನಾಮರ್​ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಶನಿವಾರ (ನ.11) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಠುಸ್ಸಾದ ಬಾಬರ್​ ಅಜಾಮ್​ ಪ್ಲ್ಯಾನ್​: ವಿಶ್ವಕಪ್​ನಿಂದ ಪಾಕ್​ ಔಟ್​, ಸೆಮೀಸ್​ನಲ್ಲಿ ಭಾರತಕ್ಕೆ ಕಿವೀಸ್​ ಸವಾಲು
ಸುಳಿವಿನ ಮೇರೆಗೆ ಅಸ್ಸಾಂ ರೈಫಲ್ಸ್ ಮತ್ತು ರಾಜ್ಯ ಪೊಲೀಸರ ಜಂಟಿ ತಂಡಗಳು ಮಿಜೋರಾಂ-ಮೈನಾಮರ್​ ಗಡಿಯಲ್ಲಿರುವ ಝೋಟ್ ಮತ್ತು ಝೋಖವ್ತಾರ್ ಗ್ರಾಮಗಳಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ್ದು, 2.61 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ ಎಂದು ಹೇಳಿದರು.
ಅಸ್ಸಾಂ ರೈಫಲ್ಸ್ ಅಧಿಕಾರಿಗಳ ಪ್ರಕಾರ, ವಶಪಡಿಸಿಕೊಂಡ ಹೆರಾಯಿನ್‌ನ ಮಾರುಕಟ್ಟೆ ಮೌಲ್ಯ 18.30 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಲೆಕ್ಕಕ್ಕೆ ಸಿಗದ ನಗದು ಭಾರತೀಯ ಕರೆನ್ಸಿ ನೋಟುಗಳಲ್ಲಿದೆ. 500, 200, 100 ಮತ್ತು 50 ರೂ. ಮುಖಬೆಲೆಯ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಭಾರತ ಯಾವಾಗಲೂ ಪ್ಯಾಲೆಸ್ತೇನ್ ಜೊತೆಗಿತ್ತು; ಪಿಣರಾಯಿ ವಿಜಯನ್ ನೆಹರು ನೀತಿ ಹೊಗಳಿ ಕಾಂಗ್ರೆಸ್​ ನಡೆ ಟೀಕಿಸಿದ ಕೇರಳ ಸಿಎಂ
ಜಂಟಿ ಕಾರ್ಯಾಚರಣೆಯಲ್ಲಿ ಐವರು ಮೈನಾಮರ್​ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ಅಕ್ರಮ ವಸ್ತುಗಳನ್ನು ಕಾನೂನು ಕ್ರಮಗಳಿಗಾಗಿ ಚಂಫೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು,(ಏಜೆನ್ಸೀಸ್).
BBKS10: ನನ್ನ ಬಗ್ಗೆ ಹೀಯಾಳಿಸಿದವರು, ಈಗ ನೆನಪಿಸಿಕೊಂಡರೆ ಮನಸ್ಸು ಬಹಳ ಹಗುರವಾಗಿದೆ; ಪ್ರತಾಪ್​ ಭಾವುಕ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fourteen − eleven =
Remember me
