ದೀಸ್ಪುರ್​:ಸಿಡಿಲ ಬಡಿತಕ್ಕೆ 18 ಆನೆಗಳು ಮೃತಪಟ್ಟಿರುವ ದಾರುಣ ಘಟನೆ ಅಸ್ಸಾಂನ ನಗೂನ್​ ಜಿಲ್ಲೆಯ ಬಮುನಿ ಬೆಟ್ಟದ ತುದಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಆನೆಗಳು ಸಿಡಿಲ ಬಡಿತಕ್ಕೆ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಆನೆಗಳ ಸಾವಿನ ಸಂಖ್ಯೆ ಖಚಿತಪಡಿಸಿಕೊಳ್ಳಲು ಮತ್ತು ಸಾಮೂಹಿಕ ಸಾವಿಗೆ ಕಾರಣ ಬೇರೆ ಏನಾದರೂ ಇರಬಹುದು ಎಂದು ತಿಳಿಯಲು ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಈ ಘಟನೆ ನಗೂನ್​ ಅರಣ್ಯ ವಲಯದಲ್ಲಿ ಬರುವ ಕತೈಟೊಲಿ ರೇಂಜ್​ನ ಕಂಡೊಲಿ ಪ್ರಪೂಸ್ಡ್​ ರಿಸರ್ವ್ಡ್​ ಫಾರೆಸ್ಟ್​ (ಪಿಆರ್​ಎಫ್​)ನಲ್ಲಿ ನಡೆದಿದೆ.
ಆನೆಗಳು ಸಾವಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ನಾವು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದೆವು. ಬಳಿಕ ನೆಲದ ಮೇಲೆ ಸತ್ತು ಬಿದ್ದಿದ್ದ ಆನೆಗಳ ಕಳೇಬರವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಪರಿಸರ ಮತ್ತು ಅರಣ್ಯ ಸಚಿವ ಪರಿಮಳ್​ ಸುಕ್ಲಾಬೈದ್ಯ, ಈ ಘಟನೆಯಿಂದಾಗಿ ನನಗೆ ಅತೀವ ನೋವು ಉಂಟಾಗಿದೆ. ನಾನು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈಗಾಗಲೇ ಉನ್ನತ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಶುವೈದ್ಯರು ಸಹ ಭೇಟಿ ನೀಡಿದ್ದಾರೆಂದು ತಿಳಿಸಿದರು.
ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.(ಏಜೆನ್ಸೀಸ್​)
ರಾಜಧಾನಿಯಲ್ಲಿ ಮೇ 24ರವರೆಗೆ ನಿಷೇಧಾಜ್ಞೆ ಜಾರಿ; ಉಲ್ಲಂಘಿಸಿದರೆ ಕಠಿಣ ಕ್ರಮ, ಕೇಸ್ ದಾಖಲು

ಮೊಬೈಲ್ ಬಿಟ್ಟು ನಮ್ಮೊಂದಿಗೆ ಕೆಲಸ ಮಾಡು ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು!

ಈ ರಾಶಿಯವರಿಗೆ ಇಂದು ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ: ನಿತ್ಯ ಭವಿಷ್ಯ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve − 10 =
Remember me
