ನವದೆಹಲಿ:ಚೀನಾದ ಕೋಸ್ಟ್​ ಆಚೆಗೆ ಸಿಕ್ಕಿಹಾಕಿಕೊಂಡಿದ್ದ ಹಡಗಿನ 18 ಜನ ಭಾರತೀಯ ಸೇಲರ್​ಗಳು ಶೀಘ್ರವೇ ಅವರ ಮನೆ ಸೇರಲಿದ್ದಾರೆ. 2020ರ ಸೆಪ್ಟೆಂಬರ್​ನಿಂದ ಸಿಕ್ಕಿಹಾಕಿಕೊಂಡಿದ್ದವರು, ಹಡಗಿನಲ್ಲಿ ವಾಪಸ್ ಪಯಣಿಸುತ್ತಿದ್ದು, ಫೆಬ್ರವರಿ 14 ಕ್ಕೆ ಭಾರತವನ್ನು ತಲುಪಲಿದ್ದಾರೆ ಎಂದು ಕೇಂದ್ರ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
“ಚೀನಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಂವಿ ಅನಸ್ತೇಷಿಯಾದ 18 ಭಾರತೀಯ ಸಮುದ್ರಯಾತ್ರಿಗಳು ಭಾರತಕ್ಕೆ ಬರುತ್ತಿದ್ದಾರೆ. ಇಂದು (ಫೆಬ್ರವರಿ 10) ಜಪಾನ್​ನಿಂದ ಹೊರಡಲಿದ್ದು, ಫೆಬ್ರವರಿ 14 ಕ್ಕೆಭಾರತ ತಲುಪಲಿದ್ದಾರೆ” ಎಂದು ಪೋರ್ಟ್ಸ್ ಶಿಪ್ಪಿಂಗ್ ಮತ್ತು ವಾಟರ್​ವೇಸ್​ ಸಚಿವರಾದ ಮಾಂಡವೀಯ ಹೇಳಿದ್ದಾರೆ.
ಇದನ್ನೂ ಓದಿ:ಜಲಸೇನೆಯ ಸೇಲರ್​ನನ್ನು ಜೀವಂತ ಸುಟ್ಟ ಅಪಹರಣಕಾರರು
ಈ ನಿಟ್ಟಿನಲ್ಲಿ ಚೀನಾದಲ್ಲಿನ ಭಾರತೀಯ ಎಂಬೆಸಿ ಮಾಡಿದ ಯತ್ನಗಳನ್ನು ಪ್ರಶಂಸಿಸಿರುವ ಮಾಂಡವೀಯ ಅವರು, ಅವರ ಪುನರಾಗಮನವನ್ನು ವ್ಯವಸ್ಥೆಗೊಳಿಸಿದ ಮೆಡಿಟರೇನಿಯನ್ ಶಿಪ್ ಕಂಪೆನಿಗೂ ಧನ್ಯವಾದ ಹೇಳಿದ್ದಾರೆ. ಈ ಮುನ್ನ ಚೀನಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಂವಿ ಜಗ್ ಆನಂದ್ ಹಡಗಿನ 23 ಸಮುದ್ರಯಾತ್ರಿಗಳು ಜನವರಿ 14 ರಂದು ಭಾರತ ತಲುಪಿದ್ದರು.(ಏಜೆನ್ಸೀಸ್)
ಟ್ಯೂಷನ್​ಗೆ ಬಂದ 11 ವರ್ಷದ ಬಾಲಕಿಯ ಮೇಲೆರಗಿದ ಕಾಮುಕನ ಬಂಧನ

LIVE: ರೈತರ ಪ್ರತಿಭಟನೆ- ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − nineteen =
Remember me
