ಮುಂಬೈ:ಭಾರತೀಯರು ಪ್ರಯಾಣಕ್ಕಾಗಿ ಇನ್ನಿತರೆ ಸಾರಿಗೆಗಳಿಗಿಂತ ರೈಲನ್ನು ಅತಿ ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ನಡುವೆ ರೈಲುಗಳಲ್ಲಿ ಸಂಚರಿಸುವ ವೇಳೆ ಕೆಲವು ಅವಘಡಗಳು ಸಂಭವಿಸಿದರೆ, ಮಾಡಬಾರದ್ದನ್ನು ಮಾಡಲು ಹೋಗಿ ಯುವಕರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.
ವಾಣಿಜ್ಯ ನಗರಿ ಮುಂಬೈಯಲ್ಲೂ ಸಹ ಅಧಿಕ ಜನರು ರೈಲನ್ನೇ ಅವಲಂಬಿಸಿದ್ದು, ಪ್ರತಿ ನಿತ್ಯ ಕಾಲಿಡಲು ಸಹ ಜಾಗವಿರುವುದಿಲ್ಲ. ಬಾಗಿಲಿನಲ್ಲೇ ನಿಂತು ನೇತಾಡಿ ತಮ್ಮ ಜಾಗಗಳನ್ನು ಸೇರುತ್ತಾರೆ.
ಇದೇ ರೀತಿ ಸಂಚರಿಸುತ್ತಿರುವ ರೈಲಿನ ಬಾಗಿಲಿನಲ್ಲೇ ನಿಂತಿದ್ದ ನಾಲ್ವರ ಪೈಕಿ ಓರ್ವ ಬಿದ್ದು, ಗಂಭೀರ ಗಾಯಗೊಂಡಿರುವ ಭೀಕರ ದೃಶ್ಯವನ್ನು ಮತ್ತೊಂದು ರೈಲಿನಲ್ಲಿ ಚಲಿಸುತ್ತಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಡ್ಯಾನಿಶ್​ ಹುಸೇನ್​ ಖಾನ್​ (18) ಎಂಬ ಯುವಕ ಚಲಿಸುತ್ತಿದ್ದ ರೈಲಿನಿಂದ ಕೈ ಹೊರಗಿಟ್ಟಿದ್ದೇ ಈತನಿಗೆ ಮುಳುವಾಗಿದೆ.
The 18-year-old has been admitted with fractures. He was lucky but many others are not.Railway police appeal to people to not risk their lives like this.@grpmumbai@HTMumbai@RoadsOfMumbai@mumbaimatterzpic.twitter.com/0iBjuTn3g2
ಕಲ್ವಾದಿಂದ ಠಾಣೆಗೆ ಹೊರಡುತ್ತಿದ್ದ ಮುಂಬೈ ಸಬ್​ಅರ್ಬನ್​ ರೈಲಿನಲ್ಲಿ ಗುರುವಾರ ಬೆಳಗ್ಗೆ 9.30ರ ವೇಳೆಯಲ್ಲಿ ಯುವಕ ಆಯಾತಪ್ಪಿ ಬಿದ್ದಿದ್ದು, ಸದ್ಯ ಈ ಭೀಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈತ ಬಿದ್ದ 20 ನಿಮಿಷಗಳ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದು ಆತನನ್ನು ಆಟೋ ರಿಕ್ಷಾ ಮೂಲಕ ಹತ್ತಿರ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್​ ಆತನ ಪ್ರಾಣಕ್ಕೇನು ಹಾನಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + sixteen =
Remember me
