ಕಾನ್ಪುರ:ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಅಪ್ಪನೊಬ್ಬನ ಪೈಶಾಚಿಕ ಅವತಾರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಸಾರ್ವಜನಿಕವಾಗಿಯೇ 18 ವರ್ಷದ ಮಗಳ ಕತ್ತು ಕೊಯ್ದ ಅಪ್ಪನ ಅವತಾರಕ್ಕೆ ಅಲ್ಲಿದ್ದವರ ಬೆನ್ನಹುರಿಯಲ್ಲಿ ನಡುಕ ಉಂಟಾಗಿದೆ.
ಗಂಜೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾನ್​ಪನ್ನ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಕುಕೃತ್ಯ ನಡೆದಿದೆ. ಹದಿನೆಂಟು ವರ್ಷದ ಮಗಳು ಮನೆಯಿಂದ ತಪ್ಪಿಸಿಕೊಂಡು ಹೋಗಿ ಅದೇ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ 20 ವರ್ಷದ ಬಾಯ್​ ಫ್ರೆಂಡ್ ಮನೆಯಲ್ಲಿರುವ ವಿಚಾರ ಗೊತ್ತಾಗಿ ಅಪ್ಪನಿಗೆ ಕೋಪ ನೆತ್ತಿಗೇರಿತ್ತು. ಕೂಡಲೇ ಅವರ ಮನೆಗೆ ಓಡಿ ಹೋದ ಹುಡುಗಿಯ ಅಪ್ಪನ ಅವತಾರ ಕಂಡು ಆ ಯುವಕ ಮತ್ತ ಅವರ ಕುಟುಂಬದವರು ಬೆಚ್ಚಿಬಿದ್ದರು. ಕೈಯಲ್ಲಿ ಮಚ್ಚು ಹಿಡಿದು ಹುಡುಗಿಯನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಏನು ವಿಶ್ ಮಾಡಿದ್ರು?
ಆದರೆ, ಯುವತಿ ತಮ್ಮ ಮನೆಯಲ್ಲೆ ಇರುವುದಾಗಿ ಹಟ ಹಿಡಿದು ಕುಳಿತಿದ್ದಾಳೆ. ಏನೂ ಮಾಡಲಾಗದು ಎಂದು ಯುವಕ ಮತ್ತು ಆತನ ಅಪ್ಪ ಹೇಳಿದ್ದರು. ಯುವತಿಯೂ ಮನೆಯಿಂದ ಹೊರಗೆ ಬಂದು ನಾನು ಮನೆಗೆ ಬರಲ್ಲ. ಇಲ್ಲೇ ಇವರ ಜತೆಗೆ ಇರುತ್ತೇನೆ ಎಂದು ಹೇಳಿದಾಗ ಅಪ್ಪನ ಕೋಪ ಇನ್ನಷ್ಟು ಕೆರಳಿದೆ. ಮಗಳ ಜುಟ್ಟು ಹಿಡಿದು ಎಳೆದು ಬೀದಿಗೆ ತಂದು ನಿಲ್ಲಿಸಿ, ಮಚ್ಚು ಬೀಸಿದ್ದಾನೆ. ಒಂದೇ ಏಟಿಗೆ ಕುಸಿದ ಮಗಳನ್ನು ಬಿಡದೆ ಆಕೆಯ ಪ್ರಾಣ ಹೋಗುವ ತನಕ ಮಚ್ಚು ಬೀಸಿದ್ದ.
ಇದನ್ನೂ ಓದಿ:ಹೊಸ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ನಿರ್ಮಾಣದ ಗುತ್ತಿಗೆ ಯಾರಿಗೆ?
ಇದೊಂದು ಮರ್ಯಾದಾ ಹತ್ಯೆ ಪರಿಗಣಿಸಿರುವ ಪೊಲೀಸರು, ಅಪ್ಪನ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯನ್ನು ಕಣ್ಣಾರೆ ನೋಡಿದವರೆಲ್ಲರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಮೃತ ಯುವತಿಯ ಬಾಯ್​ಫ್ರೆಂಡ್ ಆಘಾತಕ್ಕೆ ಒಳಗಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಬಸವನಬಾಗೇವಾಡಿ ತಾಲೂಕಿನಲ್ಲಿ ಭೂಕಂಪನ ಅನುಭವಕ್ಕೆ ಮನೆಯಿಂದ ಹೊರಗೋಡಿ ಬಂದ್ರು ಜನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
