ನೋಯ್ಡಾ:ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಈ ವಿದ್ಯಾರ್ಥಿಯೇ ಜೀವಂತ ನಿದರ್ಶನವಾಗಿದ್ದಾನೆ. ಇತ್ತೀಚಿಗೆ ಪ್ರಕಟಗೊಂಡ ನೀಟ್​-ಯುಜಿ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಯೂ 720ಕ್ಕೆ 664 ಅಂಕ ಗಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದು, ಈತನ ಸಾಧನೆಯನ್ನು ಜನರು ಕೊಂಡಾಡುತ್ತಿದ್ದಾರೆ.
ಉತ್ತರಪ್ರದೇಶದ ನೋಯ್ಡಾ ನಿವಾಸಿ ಸನ್ನಿ ಕುಮಾರ್​ ನೀಟ್​ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತೇರ್ಗಡೆಯಾಗಿದ್ದು, ಈತ ಜೀವನೋಪಾಯಕ್ಕಾಗಿ ಸಮೋಸಾ ಅಂಗಡಿಯನ್ನು ನಡೆಸುತ್ತಿದ್ದಾನೆ. ಕಾಲೇಜು ಮುಗಿದ ನಂತರ ಪ್ರತಿನಿತ್ಯ 4-5 ಗಂಟೆಗಳ ಕಾಲ ಅಂಗಡಿಯಲ್ಲಿ ಕೆಲಸ ಮಾಡುವ ಈತ ತನ್ನ ಕಷ್ಟದ ಸಮಯದಲ್ಲೂ ವೈದ್ಯನಾಗಬೇಕೆಂಬ ಹಂಬಲದೊಂದಿಗೆ ಓದಿ ನೀಟ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.

A post shared by Physics Wallah (PW) (@physicswallah)
ಇದನ್ನೂ ಓದಿ:ರೋಹಿತ್ ಶರ್ಮಾ 37, ಆರ್ ಅಶ್ವಿನ್ 37, ವಿರಾಟ್ ಕೊಹ್ಲಿ 35… ಟೀಮ್​ ಇಂಡಿಯಾ ಕುರಿತು ಮಾಜಿ ಕೋಚ್​ ಹೇಳಿಕೆ ವೈರಲ್​
ಈ ಕುರಿತು ಮಾತನಾಡಿರುವ ಸನ್ನಿ, ನಾನು ಮೆಡಿಕಲ್​ ಸ್ಟೋರ್​ಗೆ ಹೋದಾಗ ಔಷಧಗಳನ್ನು ನೋಡಿ ನನಗೆ ಕುತೂಹಲ ಹೆಚ್ಚಾಗುತ್ತಿತ್ತು. ಇಷ್ಟು ಚಿಕ್ಕ ವಸ್ತು ಅದೇಗೆ ಅಷ್ಟು ದೊಡ್ಡ ಕಾಯಿಲೆಯನ್ನು ಸರಿಪಡಿಸುತ್ತದೆ ಎಂದು ಒಮ್ಮೆ ಯೋಚಿಸಿದೆ. ಆ ಬಳಿಕ ನನಗೆ ವೈದ್ಯನಾಗಬೇಕೆಂಬ ಆಸೆ ಹುಟ್ಟಿತ್ತು. ಇದಕ್ಕಾಗಿ 11ನೇ ತರಗತಿಯಿಂದಲೂ ಫಿಸಿಕ್ಸ್​ವಾಲಾ ಆನ್​​ಲೈನ್​ ತರಗತಿಯಲ್ಲಿ ದಿನನಿತ್ಯ ಅಟೆಂಡ್​ ಮಾಡುತ್ತಿದ್ದೆ. ಅದರಿಂದ ಕಲಿತ ವಿಷಯಗಳಿಂದ ಸ್ಫೂರ್ತಿ ಪಡೆದು ಪರೀಕ್ಷೆ ಬರೆದೆ ಎಂದು ಹೇಳಿದ್ದಾರೆ
ಫಿಸಿಕ್ಸ್​ವಾಲಾ ಮುಖ್ಯಸ್ಥ ಅಲಖ್​ ಪಾಂಡೆ ಈ ಸ್ಫೂರ್ತಿದಾಯಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಯನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಕಠಿಣ ಪರಿಶ್ರಮ ಒಂದಿದ್ದರೆ ಸಾಕು ಪ್ರೆತಿಫಲ ಸಿಗುತ್ತದೆ ಎಂಬುದಕ್ಕೆ ಈ ಹುಡುಗನೇ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
