ತಿರುವನಂತಪುರಂ:ಯುವಕನೊಬ್ಬ ಬೈಕ್​ನಲ್ಲಿ ವ್ಹೀಲಿಂಗ್​ ಮಾಡುತ್ತಾ ಶಾಲಾ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿರುವ ಘಟನೆ ತಿರುವನಂತಪುರಂನ ಕಲ್ಲಂಬಲಮ್​ನಲ್ಲಿ ಭಾನುವಾರ (ಫೆ.12) ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆರೋಪಿ ಯುವಕನನ್ನು 18 ವರ್ಷದ ನೌಫಲ್​ ಎಂದು ಗುರುತಿಸಲಾಗಿದೆ. ಅಪಾಯಕಾರಿ ಡ್ರೈವಿಂಗ್​ ಸಂಬಂಧಿಸಿದಂತೆ ಯುವಕನ ವಿರುದ್ಧ 6 ಪ್ರಕರಣಗಳು ಈ ಹಿಂದೆಯೇ ದಾಖಲಾಗಿವೆ.
ವಿಡಿಯೋದಲ್ಲಿ ನೌಫಲ್ ತನ್ನ ಬೈಕ್‌ನ ಮುಂಭಾಗವನ್ನು ಎತ್ತುವ ಮೇಲಕ್ಕೆತ್ತಿ ವ್ಹೀಲಿಂಗ್​ ಮಾಡುವ ಮೂಲಕ ಸಾಹಸ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ.
ವರದಿಗಳ ಪ್ರಕಾರ ಘಟನೆಯಲ್ಲಿ ಬೈಕ್​ ಸವಾರ ನೌಫಲ್ ಮತ್ತು ಶಾಲಾ ವಿದ್ಯಾರ್ಥಿನಿಗೆ ಗಾಯಗಳಾಗಿವೆ. ಇದೇ ಸಂದರ್ಭದಲ್ಲಿ ಮೋಟಾರು ವಾಹನ ಇಲಾಖೆ (ಎಂವಿಡಿ) ಬಾಲಕನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಚೆನ್ನೈ ತಮಿಳು ನ್ಯೂಸ್​)

Breaking News| ಗುಜರಾತ್​ ಗಲಭೆ ಸಾಕ್ಷ್ಯಚಿತ್ರ ವಿವಾದ: ದೆಹಲಿಯ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ

ಕಳೆದ 4 ವರ್ಷದಲ್ಲಿ 20,455 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಟ್ಟ ಬಿಜೆಪಿ ಸರ್ಕಾರ!

ಅವಶೇಷಗಳ ಅಡಿ ಸಿಲುಕಿದ್ದರೂ ಸಾವನ್ನೇ ಸೋಲಿಸಿದರು! ಟರ್ಕಿ- ಸಿರಿಯಾದಲ್ಲಿ ರಕ್ಷಣಾ ಕಾರ್ಯ ವೇಳೆ ಹಲವು ಅಚ್ಚರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
