ನವದೆಹಲಿ :ಈ ವರ್ಷಾಂತ್ಯದ ವೇಳೆಗೆ ಭಾರತದ ಇಡೀ ವಯಸ್ಕ ಜನಸಂಖ್ಯೆಗೆ ಕರೊನಾ ಲಸಿಕೆ ನೀಡಿ ಮುಗಿಸುವ ಗುರಿ ಹೊಂದಿದ್ದು, ಅದಕ್ಕೆ ಅಗತ್ಯವಾದ ಸುಮಾರು 188 ಕೋಟಿ ಲಸಿಕೆ ಡೋಸ್​ಗಳನ್ನು ಕನಿಷ್ಠ ಐದು ಉತ್ಪಾದಕರಿಂದ ಪಡೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತನ್ನ ಲಸಿಕಾ ನೀತಿಯ ಕುರಿತು ಕೋರ್ಟ್‌ ಕೇಳಿದ್ದ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಶನಿವಾರ ಸಲ್ಲಿಸಿರುವ 375 ಪುಟಗಳ ಅಫಿಡೆವಿಟ್‌ನಲ್ಲಿ, ಸರ್ಕಾರ ಈ ಮಾಹಿತಿ ನೀಡಿದೆ.
“18 ವರ್ಷ ಮೇಲ್ಪಟ್ಟ ಜನರ ಒಟ್ಟು ಸಂಖ್ಯೆಯು ಸುಮಾರು 93-94 ಕೋಟಿಯಷ್ಟಿದ್ದು, ಎಲ್ಲರಿಗೂ ಲಸಿಕೆ ನೀಡಲು ಅಂದಾಜು 186 ರಿಂದ 188 ಕೋಟಿ ಲಸಿಕೆ ಡೋಸ್​ಗಳು ಬೇಕಾಗುತ್ತವೆ. ಇದರಲ್ಲಿ ಜುಲೈ 31 ರವರೆಗೆ 51.6 ಕೋಟಿ ಡೋಸ್​ಗಳನ್ನು ಲಭ್ಯಗೊಳಿಸಲಾಗುವುದು. ಮತ್ತೆ ಉಳಿದ 135 ಕೋಟಿ ಡೋಸ್​ಗಳನ್ನು ಕಾಲಕ್ರಮೇಣ ಪಡೆದು ಇಡೀ ಅರ್ಹ ವಯೋಮಾನದ ಜನಸಂಖ್ಯೆಗೆ ಲಸಿಕಾಕರಣ ಪೂರೈಸಲಾಗುವುದು” ಎಂದು ಸರ್ಕಾರ ತಿಳಿಸಿದೆ. ಈ ದೊಡ್ಡ ಪ್ರಮಾಣದ ಲಸಿಕೆಗಳನ್ನು ಹೇಗೆ ಸಂಗ್ರಹಿಸಲು ಯೋಜಿಸಿದೆ ಎಂದೂ ಸರ್ಕಾರ ವಿವರಗಳನ್ನು ನೀಡಿದೆ.
ಇದನ್ನೂ ಓದಿ:11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ
ಜೂನ್ 21 ರಿಂದ ಎಲ್ಲಾ ವಯಸ್ಕರಿಗೆ ಉಚಿತ ಲಸಿಕಾ ಅಭಿಯಾನವನ್ನು ವಿಸ್ತರಿಸಲಾಗಿದೆ. ಕೋವಿನ್​ ನೋಂದಣಿಯ ಅನುಕೂಲವಿಲ್ಲದವರಿಗೆ ವಾಕ್​ ಇನ್​ ಸೌಲಭ್ಯ ನೀಡಲಾಗಿದೆ. ಜೂನ್ 25 ರವರೆಗೆ ದೇಶದಲ್ಲಿ 31 ಕೋಟಿ ಲಸಿಕೆ ಡೋಸ್​ಗಳನ್ನು ನೀಡಲಾಗಿದ್ದು, ಒಟ್ಟು ವಯಸ್ಕ ಜನಸಂಖ್ಯೆಯ ಶೇಕಡ 5.6 ರಷ್ಟು ಜನರು ಎರಡೂ ಡೋಸ್​ ಲಸಿಕೆ ಪಡೆದಿದ್ದಾರೆ. ಸುಮಾರು 56.24 ರಷ್ಟು ಗ್ರಾಮೀಣ ಜನಸಂಖ್ಯೆ ಈವರೆಗೆ ಲಸಿಕೆ ಪಡೆದಿದೆ ಎಂದು ಸರ್ಕಾರ ತಿಳಿಸಿದೆ.(ಏಜೆನ್ಸೀಸ್)
ಪೊಲೀಸ್​ ಇಲಾಖೆ ವೆಬ್​ಸೈಟ್​ಗೆ ಹೊಸ ರೂಪ! ಅಪೂರ್ಣ ಕೆಎಸ್​ಪಿ ಜಾಲತಾಣಕ್ಕೆ ಗುಡ್​ಬೈ

ಲಕ್ಕಿ ಡ್ರಾನಲ್ಲಿ 16 ಕೋಟಿ ರೂ. ಔಷಧ ಪಡೆದ ಹೆಣ್ಣುಮಗು! ಬಡ ಪಾಲಕರ ಪ್ರಾರ್ಥನೆಗೆ ಒಲಿಯಿತು ಅದೃಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + one =
Remember me
