ನವದೆಹಲಿ:ಕರ್ನಾಟಕದ 19 ಮಂದಿ ಸೇರಿದಂತೆ ದೇಶಾದ್ಯಂತ ಒಟ್ಟು 946 ಮಂದಿ ಪೊಲೀಸರು ಈ ಬಾರಿಯ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಇವರಿಗೆ ನಾಳಿನ (ಜ.26) ಗಣರಾಜ್ಯೋತ್ಸವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತಿದೆ.
ಪದಕಕ್ಕೆ ಆಯ್ಕೆಯಾಗಿರುವ ಒಟ್ಟು 946 ಮಂದಿಯಲ್ಲಿ 205 ಪೊಲೀಸರು ರಾಷ್ಟ್ರಪತಿಗಳ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ. ವಿಶೇಷ ಸೇವಗಾಗಿ 89 ಮಂದಿ ಮತ್ತು ಪ್ರಶಂಸನೀಯ ಸೇವೆಗೆ 650 ಮಂದಿಗೆ ರಾಷ್ಟ್ರಪತಿ ಪದಕದ ಗೌರವ ದೊರಕುತ್ತಿದೆ.

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಎಎಸ್​ಐ ಮೋಹನ್​ ಲಾಲ್​ ಸಹ ಶೌರ್ಯ ಮರಣೋತ್ತರ ಪದಕಕ್ಕೆ ಆಯ್ಕೆಯಾಗಿದ್ದಾರೆ. ಪುಲ್ವಾಮ ದಾಳಿ ವೇಳೆ ಸಿಆರ್​ಪಿಎಫ್​ ಬೆಂಗಾವಲು ವಾಹನದತ್ತ ವೇಗವಾಗಿ ಬರುತ್ತಿದ್ದ ಸ್ಫೋಟಕ ತುಂಬಿದ ಐಇಡಿ ಲ್ಯಾಡೆನ್​ ಕಾರನ್ನು ಗಮನಿಸಿ, ಅದರತ್ತ ಗುಂಡು ಹಾರಿಸಿ ಮೋಹನ್​ ಲಾಲ್​ ಹುತಾತ್ಮರಾಗಿದ್ದರು. ಈ ದಾಳಿ ವೇಳೆ 40 ಸಿಆರ್​ಪಿಎಫ್​ ಯೋಧರು ಪ್ರಾಣ ತ್ಯಾಗ ಮಾಡಿದ್ದರು.
ಸಿಆರ್​ಪಿಎಫ್​ ಹೆಚ್ಚು ಪದಕಕ್ಕೆ ಪಾತ್ರರಾಗಿದ್ದು, ಒಟ್ಟು 946ರಲ್ಲಿ 137 ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಉತ್ತರ ಪ್ರದೇಶ ಪೊಲೀಸರು (97), ಬಿಎಸ್​ಎಫ್​ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು (71) ಪದಕಗಳಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ 19 ಮಂದಿ ಆಯ್ಕೆಯಾಗಿದ್ದು, ಮಂಗಳವಾರ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿಗಳ ಶೌರ್ಯ ಪದಕವನ್ನು ಸ್ವೀಕರಿಸಲಿದ್ದಾರೆ.(ಏಜೆನ್ಸೀಸ್​)
ಮತ್ತೆ ಸಚಿವರ ಖಾತೆ ಅದಲು-ಬದಲು! ಯಾರಿಗೆ, ಯಾವುದು ಸಿಕ್ತು? ಇಲ್ಲಿದೆ ಡಿಟೇಲ್ಸ್​

ಲಾಕ್​ಡೌನ್​ನಲ್ಲಿ ಮುಕೇಶ್​ ಅಂಬಾನಿ ಗಂಟೆಗೆ ಎಷ್ಟು ಸಂಪಾದಿಸಿದ್ದಾರೆ ಗೊತ್ತೇ? ಅಚ್ಚರಿ ಮೂಡಿಸುವ ಅಂಕಿ ಅಂಶವಿದು

100, 10, 5 ರೂಪಾಯಿಯ ಹಳೆ ನೋಟುಗಳು ಚಲಾವಣೆ ಆಗಲ್ವಾ? ಆರ್​ಬಿಐ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
