ಬೆಂಗಳೂರು:ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸರ ಗಣನೀಯ ಸೇವೆ ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 19 ಪೊಲೀಸ್​ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.
ಕೇಂದ್ರ ಗೃಹ ಇಲಾಖೆಯು ರಾಷ್ಟ್ರ ಪದಕಕ್ಕೆ ಆಯ್ಕೆಯಾದವರನ್ನು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ಯಾದು, ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ಪದಕ ಪ್ರದಾನ ಮಾಡಲಾಗುತ್ತದೆ. ಲೋಕಾಯುಕ್ತ ಸಂಸ್ಥೆ ಅಕ್ರಮ ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ ತಂಡದಲ್ಲಿ ಸೇವೆ ಸಲ್ಲಿಸಿದ ಸಿಐಡಿ ಸಹಾಯಕ ಸಬ್​ಇನ್​ಸ್ಪೆಕ್ಟರ್​ ವಿ.ಎಲ್​.ಎನ್​. ಪ್ರಸನ್ನಕುಮಾರ್​ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪದಕ ಲಭಿಸಿದೆ. ಶ್ಲಾಘನೀಯ ಸೇವಾ ಪದಕ 18 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಭಿಸಿದೆ. ಆ ಮೂಲಕ ರಾಜ್ಯದ ಒಟ್ಟು 19 ಪೊಲೀಸರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ.
ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದವರ ಪಟ್ಟಿ ಹೀಗಿದೆ.1. ಹೇಮಂತ್​ ಕುಮಾರ್​- ಡಿವೈಎಸ್​ಪಿ, ಲೋಕಾಯುಕ್ತ, ಬೆಂಗಳೂರು.2. ಪರಮೇಶ್ವರ ಹೆಗ್ಡೆ- ಡಿವೈಎಸ್​ಪಿ, ಆಥಿರ್ಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು.3. ಆರ್​.ಮಂಜುನಾಥ್​- ಡಿವೈಎಸ್​ಪಿ, ಎಸಿಬಿ, ಮಂಡ್ಯ.4. ಎಚ್​.ಎಂ.ಶೈಲೇಂದ್ರ- ಡಿವೈಎಸ್​ಪಿ, ಸೋಮವಾರಪೇಟೆ ವಿಭಾಗ, ಕೊಡಗು.5. ಅರುಣ್​ ನಾಗೇಗೌಡ- ಡಿವೈಎಸ್​ಪಿ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ.6. ಎಚ್​.ಎಂ. ಸತೀಶ್​- ಎಸಿಪಿ, ಈಶಾನ್ಯ ಸಂಚಾರ ವಿಭಾಗ, ಬೆಂಗಳೂರು.7. ಎಚ್​.ಬಿ. ರಮೇಶ್​ ಕುಮಾರ್​- ಡಿವೈಎಸ್​ಪಿ, ರಾಜ್ಯ ಗುಪ್ತಚರ, ತುಮಕೂರು.8. ಪಿ. ಉಮೇಶ್​- ಡಿವೈಎಸ್​ಪಿ, ಪೊಲೀಸ್​ ತರಬೇತಿ ಶಾಲೆ, ಜ್ಯೋತಿನಗರ, ಮೈಸೂರು.9. ಸಿ.ಎನ್​. ದಿವಾಕರ- ಇನ್​ಸ್ಪೆಕ್ಟರ್​, ಮಡಿಕೇರಿ ಗ್ರಾಮೀಣ ವೃತ್ತ, ಕೊಡಗು.10. ಜಿ.ಎನ್​. ರುದ್ರೇಶ್​- ಇನ್​ಸ್ಪೆಕ್ಟರ್​, ಕೆಎಸ್​ಆರ್​ಪಿ, ಬೆಂಗಳೂರು.11. ಬಿ.ಎ. ಲಕ್ಷ್ಮೀನಾರಾಯಣ್​- ಪಿಎಸ್​ಐ, ನಗರ ವಿಶೇಷ ವಿಭಾಗ, ಬೆಂಗಳೂರು.12. ಎಚ್​.ಎಂ.ಚಂದ್ರಶೇಖರ್​- ಪಿಎಸ್​ಐ, ಕೆಎಸ್​ಆರ್​ಪಿ, ಬೆಂಗಳೂರು.13. ಕೆ. ಜಯಪ್ರಕಾಶ್​- ಪಿಎಸ್​ಐ, ಮಂಗಳೂರು ನಗರ, ನಿಯಂತ್ರಣ ಕೊಠಡಿ.14.ಎಚ್​. ನಂಜುಂಡಯ್ಯ- ಎಎಸ್​ಐ, ಡಿಸಿಆರ್​ಬಿ, ಎಸ್​ಪಿ ಕಚೇರಿ, ಚಿಕ್ಕಬಳ್ಳಾಪುರ.15. ಹತೀಕ್​ ಯು.ಆರ್​. ರೆಹಮಾನ್​- ಎಎಸ್​ಐ, ಬೆರಳಚ್ಚು ವಿಭಾಗ, ಶಿವಮೊಗ್ಗ.16. ರಾಮಾಂಜನೇಯ- ಎಎಸ್​ಐ, ಕೆ.ಬಿ.ಕ್ರಾಸ್​ ಪೊಲೀಸ್​ ಠಾಣೆ, ತುಮಕೂರು.17. ಆರ್​.ಎನ್​. ಬಾಳೆಕಾಯಿ- ಎಎಸ್​ಐ, ರಾಣೇಬೆನ್ನೂರು ಗ್ರಾಮೀಣ ಠಾಣೆ, ಹಾವೇರಿ ಜಿಲ್ಲೆ.18. ಕೆ. ಹೊನ್ನಪ್ಪ- ಮುಖ್ಯಪೇದೆ, ಬೆಂಗಳೂರು ಜಿಲ್ಲೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
