ಚೆನ್ನೈ:ಪ್ರಿಯಕರನಿಗೆ ಬೆದರಿಸಿ ಆತನ ಎದುರೇ ಅವನ ಪ್ರೇಯಸಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣವೊಂದು ನಡೆದಿದೆ. 19 ವರ್ಷದ ವಿದ್ಯಾರ್ಥಿನಿ ಮೇಲೆ ಐವರು ಈ ಅತ್ಯಾಚಾರ ನಡೆಸಿದ್ದಾರೆ.
ತಮಿಳುನಾಡು ಹೊರವಲಯದ ಕಂಚೀಪುರಂ ಸಮೀಪ ಬೆಂಗಳೂರು-ಪುದುಚೆರಿ ಹೊರವರ್ತುಲ ರಸ್ತೆಯಲ್ಲಿ ಗುರುವಾರ ರಾತ್ರಿ ಈ ಪ್ರಕರಣ ನಡೆದಿದೆ. ಐವರು ದುಷ್ಕರ್ಮಿಗಳು ಪ್ರಿಯಕರನಿಗೆ ಚಾಕು ತೋರಿಸಿ ಬೆದರಿಸಿ ಆತನ ಎದುರೇ ಪ್ರೇಯಸಿಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದಿದ್ದಾರೆ.
ಪ್ರಕರಣದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ತಂದೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಶುಕ್ರವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರ ವೇಳೆ ಸಹಕರಿಸದಿದ್ದರೆ ಕೊಲೆ ಮಾಡುವುದಾಗಿಯೂ ಆರೋಪಿಗಳು ಬೆದರಿಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಅತ್ಯಾಚಾರ ವೇಳೆ ದುಷ್ಕರ್ಮಿಗಳು ವಿಮಲ್​ಕುಮಾರ್ ಎಂಬ ಹೆಸರನ್ನು ಕರೆದಿದ್ದು, ಆ ಸುಳಿವಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಮಲ್​ಕುಮಾರ್ (25), ಮಣಿಕಂಠಣ್ (22), ಶಿವಕುಮಾರ್ (20), ವಿಘ್ನೇಶ್ (22) ಮತ್ತು ತೆನ್ನರಸು (23) ಬಂಧಿತ ಆರೋಪಿಗಳು.
ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..
ಈ ಬೆಟ್ಟಕ್ಕೆ ಜ. 15, 16ರಂದು ದ್ವಿಚಕ್ರ ವಾಹನಗಳ ಪ್ರವೇಶ ನಿಷೇಧ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − twelve =
Remember me
