ಕೋಯಿಕ್ಕೋಡ್​:ಒಳಉಡುಪಿನಲ್ಲಿ ಒಂದು ಕೋಟಿ ರೂ. ಮೌಲ್ಯದ ಚಿನ್ನವನ್ನು ಬಿಚ್ಚಿಟ್ಟು, ಕಳ್ಳಸಾಗಾಣೆ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಕೇರಳದ ಕರೀಪುರ್​ ವಿಮಾನ ನಿಲ್ದಾಣದ ಬಳಿಕ ಬಂಧಿಸಲಾಗಿದೆ.
ಬಂಧಿತಳನ್ನು ಶೆಹಲಾ ಎಂದು ಗುರುತಿಸಲಾಗಿದೆ. ಈಕೆ ಕಾಸರಗೋಡು ಮೂಲದವಳು. ಒಳಉಡುಪಿನಲ್ಲಿ ಚಿನ್ನವನ್ನು ಇಟ್ಟು ಯಾರಿಗೂ ಅನುಮಾನ ಬರದಂತೆ ಹೊಲಿಗೆ ಹಾಕಿ ದುಬೈನಿಂದ ಕೇರಳಕ್ಕೆ ಕದ್ದು ಸಾಗಿಸುತ್ತಿದ್ದಳು.
ಭಾನುವಾರ ಬೆಳಗ್ಗೆ 10.30ಕ್ಕೆ ಶೆಹಲಾ, ಕರೀಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಳು. ಈ ವೇಳೆ ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಯಾವುದೇ ಚಿನ್ನ ಪತ್ತೆಯಾಗಲಿಲ್ಲ. ಆಕೆ 11 ಗಂಟೆಗೆ ವಿಮಾನ ನಿಲ್ದಾಣದ ಹೊರಗೆ ಬಂದಳು. ಇದೇ ಸಂದರ್ಭದಲ್ಲಿ ಮಹಿಳೆ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ರಹಸ್ಯ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ಆಧಾರದ ಮೇಲೆ ಕರೀಪುರ ಪೊಲೀಸರು ಪರಿಶೀಲನೆ ನಡೆಸಿದರು.
ಪೊಲೀಸರು ಶೆಹಲಾಳ ಲಗೇಜುಗಳನ್ನು ಪರಿಶೀಲಿಸಿ, ಗಂಟೆಗಟ್ಟಲೆ ವಿಚಾರಣೆ ನಡೆಸಿದರು. ಆಗಲೂ ಚಿನ್ನ ಸಿಗಲಿಲ್ಲ. ಅಲ್ಲದೆ, ತಾನು ಯಾವುದೇ ಚಿನ್ನವನ್ನು ಕಳ್ಳಸಾಗಣೆ ಮಾಡಿಲ್ಲ ಎಂದು ಪೊಲೀಸರ ಮುಂದೆ ಒತ್ತಿ ಒತ್ತಿ ಹೇಳುತ್ತಿದ್ದಳು. ನಂತ ಆಕೆಯ ಇಡೀ ದೇಹವನ್ನು ಪರೀಕ್ಷಿಸಿದಾಗ, ಆಕೆಯ ಒಳಉಡುಪುಗಳಲ್ಲಿ ಮೂರು ಪ್ಯಾಕೆಟ್‌ಗಳಲ್ಲಿ ಮಿಶ್ರ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಶೆಹಲಾ 1884 ಗ್ರಾಂ ಚಿನ್ನವನ್ನು ತಂದಿದ್ದಾಳೆ. ಕರಿಪುರ ವಿಮಾನ ನಿಲ್ದಾಣದ ಹೊರಗೆ ಪೊಲೀಸರಿಗೆ ಸಿಕ್ಕಿಬಿದ್ದ ಚಿನ್ನ ಕಳ್ಳಸಾಗಣೆಯ 86ನೇ ಪ್ರಕರಣ ಇದಾಗಿದೆ. ಯುವತಿಗೆ ಕಣ್ಣೂರು ಮೂಲದ ಕೊಟೇಶನ್ ಗ್ಯಾಂಗ್ ಜತೆ ಸಂಪರ್ಕವಿದೆ ಎಂಬ ಸುಳಿವು ಸಿಕ್ಕಿದೆ. ಚಿನ್ನವನ್ನು ಯಾರು ಕಳುಹಿಸಿದ್ದಾರೆ ಮತ್ತು ಯಾರಿಗಾಗಿ ತಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಒಳಗೆ ಬಂದು ಯಾವ ಹುಡುಗಿಯನ್ನಾದರೂ ಆಯ್ದುಕೊಳ್ಳಿ… ಚೆನ್ನೈ ಹೋಟೆಲ್​ನಲ್ಲಿ ಆಫರ್​ ಬೋರ್ಡ್​, ಅಸಲಿಯತ್ತು ಬಯಲು

6000 ಟ್ವೀಟ್​ಗಳಲ್ಲಿ 4000 ಟ್ವೀಟ್​ಗೆ ಪರಿಹಾರ: ಈ ಟ್ವಿಟರ್​ ಗರ್ಲ್​ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ರಸ್ತೆ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್​ ಶಾಸಕಿಯ ಮುಂದೆಯೇ ಕಿತ್ತಾಡಿಕೊಂಡ ಕೈ ಮುಖಂಡರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 12 =
Remember me
