ನವದೆಹಲಿ:ಕರ್ನಾಟಕದಲ್ಲಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಆಂಧ್ರ ಪ್ರದೇಶದ ಬಾಲಾಜಿ ಕಾಲೇಜ್​ ಆಫ್​ ಫಾರ್ಮಸಿ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿ ಹೃದಯಾಘಾತದಿಂದ ಮಂಗಳವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾನೆ.
ಮೃತ ವಿದ್ಯಾರ್ಥಿಯನ್ನು ತನುಜ್​​​ ಕುಮಾರ್​ ನಾಯಕ್​ (19) ಎಂದು ಗುರುತಿಸಲಾಗಿದೆ. ಈತ ಆಂಧ್ರದ ಸತ್ಯ ಸಾಯಿ ಜಿಲ್ಲೆಯ ಮಡಕಸಿರಾ ಗ್ರಾಮದ ನಿವಾಸಿ. ಇತ್ತೀಚೆಗಷ್ಟೇ ಕಾಲೇಜಿಗೆ ಸೇರಿಕೊಂಡಿದ್ದ. ಕಬಡ್ಡಿ ಕೋರ್ಟ್​ನಲ್ಲಿ ಎದುರಾಳಿ ತಂಡದ ಸದಸ್ಯರೊಬ್ಬರು ರೈಡ್​ಗೆ ಬಂದಿದ ವೇಳೆ ತನುಜ್​, ಇತರ ಐದು ಜನರೊಂದಿಗೆ ನಿಂತಿದ್ದರು. ಈ ವೇಳೆ ಹೃದಯಾಘಾತವಾಗಿದೆ. ಇಡೀ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಕಾರು ತಡೆದ ಟ್ರಾಫಿಕ್​ ಪೊಲೀಸ್​: ನಡುರಸ್ತೆಯಲ್ಲೇ ಯುವತಿಯಿಂದ ಭಾರೀ ಹೈಡ್ರಾಮ, ವಿಡಿಯೋ ವೈರಲ್​
ತನುಜ್​ ಮತ್ತು ತಂಡದ ಇತರೆ ಆಟಗಾರರು ರೈಡ್​ಗೆ ಬಂದಿದ್ದ ಎದುರಾಳಿ ಆಟಗಾರನನ್ನು ಸರೆಹಿಡಿಯಲು ಪಯತ್ನಿಸುವಾಗ ಹಿಂದೆ ನಿಂತಿದ್ದ ತನುಜ್, ಇದ್ದಕ್ಕಿದ್ದಂತೆ​ ಹಾಗೇ ಹಿಂದಕ್ಕೆ ಕುಸಿದು ಬಿದ್ದರು. ತಕ್ಷಣ ತನುಜ್​ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ವೆಂಟಿಲೇಟರ್​ ನೆರವಿನಿಂದ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ತನುಜ್​ ಕೊನೆಯುಸಿರೆಳೆದಿದ್ದಾನೆ.
A 19 Years old student Tanuja Naik studying pharmacy at PVKK College in#Anantapurtown collapsed while playing Kabaddi in the college ground on the 1st of this month, and died today morning at MS Ramaiah Hospital,#Bangalore.#heartattack#SuddenDeath#viral#ViralVideospic.twitter.com/XUSKLBASHQ
— Siraj Noorani (@sirajnoorani)March 8, 2023

ತನುಜ್​ ಯಾವುದೇ ಕೋವಿಡ್​ 19 ಲಸಿಕೆ ಪಡೆದಿರಲಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಗೆ ತನುಜ್​ ಸಹೋದರ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಎರಡು ದಿನಗಳವರೆಗೆ ತನುಜ್​, ಕೋಮಾಗೆ ಜಾರಿದ್ದ. ಆದರೆ, ಮಂಗಳವಾರ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ. ಈತನ ಚಿಕಿತ್ಸೆಗಾಗಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪೋಷಕರಿಗೆ ಆರ್ಥಿಕ ನೆರವು ನೀಡಿದರು.(ಏಜೆನ್ಸೀಸ್​)
ಪ್ರಿಯಾಂಕಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಗಂಭೀರ ಆರೋಪ ಮಾಡಿದ ಮಿಸ್​ ಬಿಕಿನಿ ಗರ್ಲ್!

ಎಲ್ಲೆಂದರಲ್ಲಿ ಸಿಗರೇಟ್ ತುಂಡು ಬಿಸಾಡಿದರೆ ಬೀಳಲಿದೆ ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
