ತೆಲಂಗಾಣ:ಹನ್ನೊಂದು ನೂರು ರೂಪಾಯಿ ವಿಚಾರವಾಗಿ ನಡೆದ ಜಗಳ ವಿದ್ಯಾರ್ಥಿಯೊಬ್ಬನ ಜೀವವನ್ನೇ ಬಲಿ ತೆಗೆದುಕೊಂಡಿರುವ ಘಟನೆ ಮಂಚರ್ಯಾಲ ಜಿಲ್ಲೆಯ ಮಂದಮರ್ರಿಯಲ್ಲಿ ಈ ದಾರುಣ ಘಟನೆ ನಡೆದಿದೆ.
ಮಂಚಿರ್ಯಾಲ ಜಿಲ್ಲೆಯ ನೆನ್ನಲ ಮಂಡಲದ ಪ್ರಭಾಸ್ (19) ಮೃತ ಯುವಕ. ಮಂದಮರ್ರಿ ಮಂಡಲದ ಪೊನ್ನಾರಂ ಗ್ರಾಮದ ಎಸ್‌ಸಿ ಹಾಸ್ಟೆಲ್‌ನಲ್ಲಿದ್ದು ಸಿವಿ ರಾಮನ್ ಕಾಲೇಜಿನಲ್ಲಿ ಬಿಕಾಂ ಕಂಪ್ಯೂಟರ್ಸ್ ಪದವಿ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದನು.
ಪಾದರಕ್ಷೆ ಕೊಳ್ಳಲು ತಾಯಿ ಕೊಟ್ಟ 11 ನೂರು ರೂಪಾಯಿ ಕಾಣದ ಹಿನ್ನೆಲೆಯಲ್ಲಿಮೂರು ದಿನಗಳ ಹಿಂದೆ ಪ್ರಭಾಸ್ ಹಣ ಕಳೆದು ಹೋಗಿದೆ ಎಂದು ಸಹ ವಿದ್ಯಾರ್ಥಿಗಳ ಮೇಲೆ ಆರೋಪಿಸಿದ್ದನು.ಇದರಿಂದ ಸಿಟ್ಟಿಗೆದ್ದ ಸಹ ವಿದ್ಯಾರ್ಥಿಗಳು ಪ್ರಭಾಸ್ ಜತೆ ವಾಗ್ವಾದ ನಡೆಸಿದರು.ನಿನ್ನ ಹಣವನ್ನಲ್ಲ, ನಮ್ಮ ಹಣವನ್ನು ಕದ್ದಿದ್ದೀಯಾ ಎಂದು ಆರೋಪಿಸಿ ಹಲ್ಲೆ ನಡೆಸಿ ಆ ಹಣ ನೀಡುವಂತೆ ಕೇಳಿದ್ದಾರೆ.ಇದರಿಂದ ಪ್ರಭಾಸ್ ಕುತ್ತಿಗೆ ಹಾಗೂ ಎದೆಗೆ ಗಂಭೀರ ಗಾಯಗಳಾಗಿವೆ.ಹಾಸ್ಟೆಲ್ ಸಿಬ್ಬಂದಿ ಪ್ರಭಾಷ್​​ನನ್ನು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಚಿಕಿತ್ಸೆ ವೇಳೆ ಖಿನ್ನತೆಗೆ ಒಳಗಾದ ಪ್ರಭಾಸ್ ಆಸ್ಪತ್ರೆಯಲ್ಲಿರುವ ಯಾವುದೋ ಮದ್ದು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಚಿಕಿತ್ಸೆ ನೀಡಿದರೂ ಪ್ರಭಾಸ್ ಬದುಕುಳಿಯಲಿಲ್ಲ.ಪೊಲೀಸರು ಪ್ರಭಾಸ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಚಿರ್ಯಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಒಂದೆಡೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಪ್ರಭಾಸ್ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಲು ಕಾರಣರಾದ ಸಹ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.ಕಾನ್ಸ್‌ಟೇಬಲ್ ಪರೀಕ್ಷೆಗೆ ತಯಾರಿ ನಡೆಸುತ್ತೇನೆ, ಶೂ ಖರೀದಿಸುತ್ತೇನೆ ಎಂದ ಪ್ರಭಾಸ್ 11 ನೂರು ರೂಪಾಯಿ ನೀಡಿ, ಈಗ ಆ ಹಣ  ನನ್ನ ಅಣ್ಣನ ಪ್ರಾಣವನ್ನೇ ತೆಗೆದಿದೆ,ಸಹ ವಿದ್ಯಾರ್ಥಿಗಳಿಂದ ದಾಳಿ ಅಣ್ಣ ಸಾವನ್ನಪ್ಪಿದ್ದಾನೆ ಎಂದು ಪ್ರಭಾಸ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
