ನವದೆಹಲಿ:ಆರ್ಥಿಕ ಅಪರಾಧ ಎಸಗಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸೇರಿದ 19,111.20 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಇದುವರೆಗೆ ಮುಟ್ಟುಗೋಲು ಹಾಕಲಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧುರಿ ಈ ಕುರಿತು ಲಿಖಿತ ಉತ್ತರ ನೀಡಿದ್ದು, ಈ ಮೂವರು ಸೇರಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ 22,585.83 ಕೋಟಿ ರೂ.ವಂಚನೆ ಎಸಗಿದ್ದಾರೆ. 2022ರ ಮಾರ್ಚ್ 15ರ ದತ್ತಾಂಶ ಪ್ರಕಾರ, 19,111.20 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದರಲ್ಲಿ 15,113.91 ಕೋಟಿ ರೂಪಾಯಿಯನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಶಕ್ಕೆ ಒಪ್ಪಿಸಲಾಗಿದೆ. 335.06 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸರ್ಕಾರದ ವಶದಲ್ಲಿದೆ ಎಂದು ಹೇಳಿದರು.
ಆರು ಕೋಟಿ ಮನೆಗಳಿಗೆ ಕುಡಿಯುವ ನೀರು:ಜಲಜೀವನ ಮಿಷನ್ ಉಪಕ್ರಮ ಜಾರಿಯಾದ ನಂತರದಲ್ಲಿ ಗ್ರಾಮ ಭಾಗದಲ್ಲಿ ಹೆಚ್ಚುವರಿಯಾಗಿ 6 ಕೋಟಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಕಡೆಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಸ್​ಸಿ ವಿದ್ಯಾರ್ಥಿಗಳಿಗೆ ಸ್ಕಾಲರ್​ಷಿಪ್:ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಸಲು ಪೋಸ್ಟ್ -ಮ್ಯಾಟ್ರಿಕ್ ಸ್ಕಾಲರ್​ಷಿಪ್ – ಷೆಡ್ಯೂಲ್ಡ್ ಕಾಸ್ಟ್ (ಪಿಎಂಎಸ್-ಎಸ್​ಸಿ), ಪ್ರೀ-ಮ್ಯಾಟ್ರಿಕ್ ಸ್ಕಾಲರ್​ಷಿಪ್ ಸ್ಕೀಮ್ ಫಾರ್ ಎಸ್​ಸಿ ಸ್ಟೂಡೆಂಟ್ಸ್ ಎಂಬ ಎರಡು ಮಾದರಿಯ ಸ್ಕಾಲರ್​ಷಿಪ್ ಅನ್ನು ನೀಡಲಾಗುತ್ತಿದೆ. ಪಿಎಂಎಸ್-ಎಸ್​ಸಿ ನಲ್ಲಿ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಕಡಿಮೆ ವರಮಾನ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್​ಷಿಪ್ 11ನೇ ತರಗತಿ ಮೇಲ್ಪಟ್ಟವರಿಗೆ ಸಿಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಲೋಕಸಭೆಗೆ ತಿಳಿಸಿದರು.
ವೈದ್ಯ ಶಿಕ್ಷಣ ಯುಜಿಯಲ್ಲಿ 75% ಪಿಜಿಯಲ್ಲಿ 93% ಸೀಟು ಹೆಚ್ಚಳ:ದೇಶಾದ್ಯಂತ 2014ರಿಂದೀಚೆಗೆ ವೈದ್ಯ ಶಿಕ್ಷಣದಲ್ಲಿ ಪದವಿ ಸ್ತರದಲ್ಲಿ ಶೇಕಡ 75 ಮತ್ತು ಸ್ನಾತಕೋತ್ತರ ಸ್ತರದಲ್ಲಿ ಶೇಕಡ 93 ಸೀಟುಗಳನ್ನು ಹೆಚ್ಚಿಸಲಾಗಿದೆ. 2014ಕ್ಕೆ ಮೊದಲು 51,348 ಸೀಟುಗಳು ಯುಜಿ ಸ್ತರದಲ್ಲಿದ್ದದ್ದು, ಈಗ 89,875ಕ್ಕೆ ಏರಿಕೆಯಾಗಿದೆ. ಪಿಜಿ ಸೀಟುಗಳು 31,185 ಇದ್ದದ್ದು, ಈಗ 60,202 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ತಿಳಿಸಿದರು.
ಇವಿಗಳ ದರ ಇಳಿಯಲಿದೆ:ವಿದ್ಯುತ್ ಚಾಲಿತ ವಾಹನಗಳ ದರ ಇನ್ನೆರಡು ವರ್ಷದಲ್ಲಿ ಪೆಟ್ರೋಲಿಯಂ ವಾಹನಗಳ ಸರಿಸಮಕ್ಕೆ ಇಳಿಕೆಯಾಗಲಿದೆ. ತಂತ್ರಜ್ಞಾನ ಮತ್ತು ಹಸಿರು ಇಂಧನಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಇದಕ್ಕೆ ವೇದಿಕೆ ಒದಗಿಸಲಿವೆ. ಈಗ ಪೆಟ್ರೋಲ್​ಗೆ 100 ರೂಪಾಯಿ ವ್ಯಯಿಸುತ್ತಿದ್ದರೆ, ವಿದ್ಯುತ್ ವಾಹನ ಬಳಕೆ ನೀವು 10 ರೂಪಾಯಿ ಮಾತ್ರ ಖರ್ಚು ಮಾಡಲಿದ್ದೀರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದರು.
5000 ಕೋಟಿ ರೂ. ಉಳಿತಾಯ:ಕಾಶ್ಮೀರ ಕಣಿವೆಯಲ್ಲಿ ಅಭಿವೃದ್ಧಿ ವೇಗ ಹೆಚ್ಚಾಗಿದ್ದು, ಕಣಿವೆಯಲ್ಲಿ 6000 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗಿದೆ. ಎಂಇಐಎಲ್​ನಿಂದಾಗಿ ದೇಶಕ್ಕೆ 5000 ಕೋಟಿ ರೂ. ಉಳಿತಾಯವಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನತಿನ್ ಗಡ್ಕರಿ ಹೇಳಿದರು. ಹೈದರಾಬಾದ್​ನ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಪಾ›ಸ್ಟ್ರಕ್ಚರ್ (ಎಂಇಐಎಲ್) ಸಲ್ಲಿಸಿದ್ದ ಟೆಂಡರ್ ಐದು ಸಂಸ್ಥೆಗಳ ಪೈಕಿ ಅತಿ ಕಡಿಮೆ ಬೆಲೆಯದಾಗಿತ್ತು. ಈ ರೀತಿ ಕಾಮಗಾರಿ ವಹಿಸಿಕೊಂಡಿದ್ದರ ಪರಿಣಾಮ ಕೇಂದ್ರ ಸರ್ಕಾರ ಈ ಒಂದು ಯೋಜನೆಯಲ್ಲೇ ಐದು ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದರು.
ಬೀಜೋತ್ಪಾದನೆಗೆ ಕೇಂದ್ರ ನೆರವು:1956ರಷ್ಟು ವಿವಿಧ ತಳಿಗಳ ಬೀಜೋತ್ಪಾದನೆಗೆ ಸರ್ಕಾರ ನೆರವು ನೀಡುತ್ತ ಬಂದಿದೆ. ಗರಿಷ್ಠ ಇಳುವರಿ ನೀಡುವ 442 ಭತ್ತ, 127 ಗೋಧಿ, 291 ಎಣ್ಣೆ ಬೀಜ, 304 ಬೇಳೆ ಕಾಳು, 239 ನಾರು ಮತ್ತು ವಾಣಿಜ್ಯ ಬೆಳೆ, 118 ಮೇವು ಬೆಳೆ, 64 ಕಬ್ಬು, 16 ಇತರೆ ಬೆಳೆಗಳ ಬೀಜ ಸೇರಿವೆ.
ಜೇಮ್ಸ್​ಗೆ ಎತ್ತಂಗಡಿ ಆತಂಕ!; ನಿರ್ಮಾಪಕರು ಏನೆಂದರು?

ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
