ಲಂಡನ್:1666 ಜನವರಿ ತಿಂಗಳು. ಆಗಷ್ಟೇ ಇಂದಿರಾಗಾಂಧಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ನೇಮಕಗೊಂಡಿದ್ದರು.
ಅದೇ ಸಮಯದಲ್ಲಿ 177 ಜನರನ್ನು ಹೊತ್ತಿದ್ದ ಏರ್‌ ಇಂಡಿಯಾದ ಬೋಯಿಂಗ್‌ 707 ವಿಮಾನ ಪಶ್ಚಿಮ ಯುರೋಪ್‌ನತ್ತ ಸಾಗುತ್ತಿದ್ದಂತೆಯೇ ಪತನಗೊಂಡಿತ್ತು. ಈ ಘಟನೆಯಲ್ಲಿ ವಿಮಾನದಲ್ಲಿದ್ದ 177 ಮಂದಿ ಮೃತಪಟ್ಟಿದ್ದರು.
ಈ ಘಟನೆ ನಡೆದು 54 ವರ್ಷಗಳೇ ಕಳೆದಿವೆ. ಇದೀಗ ಇಂದಿರಾಗಾಂಧಿಯವರು ಪ್ರಧಾನಿಯಾಗಿರುವ ಕುರಿತು ಮುಖಪುಟದಲ್ಲಿ ಸುದ್ದಿ ಇರುವ ಎರಡು ಭಾರತೀಯ ಪತ್ರಿಕೆಗಳು ಪಶ್ಚಿಮ ಯುರೋಪ್‌ನಲ್ಲಿರುವ ಎತ್ತರದ ಮಾಂಟ್‌ ಬ್ಲಾಂಕ್‌ ಎಂಬ ಮಂಜುಗಡ್ಡೆಯ ಪರ್ವತದಲ್ಲಿ ಪತ್ತೆಯಾಗಿವೆ!
ಇದನ್ನೂ ಓದಿ:ಬಿಜೆಪಿ ಶಾಸಕರಿಗೆ ಆವರಿಸಿದ ಕರೊನಾ – 75 ಮಂದಿಗೆ ಪಾಸಿಟಿವ್‌!
ಇಂದಿರಾಗಾಂದಿ ಅವರು 1966ರ ಲೋಕಸಭೆ ಚುನಾವಣೆ ಜಯಿಸಿದ ಕುರಿತಾಗಿ ‘ಭಾರತಕ್ಕೆ ಪ್ರಥಮ ಮಹಿಳಾ ಪ್ರಧಾನ ಮಂತ್ರಿ’ ಎಂಬ ತಲೆಬರಹ ಈ ಪತ್ರಿಕೆಗಳಲ್ಲಿ ಇವೆ. ಅದರಲ್ಲಿ ಒಂದು ಗಾಂಧಿ ಮನೆತನದ ಒಡೆತನದಲ್ಲಿದ್ದ ನ್ಯಾಷನಲ್‌ ಹೆರಾಲ್ಡ್‌ ಹಾಗೂ ಇನ್ನೊಂದು ಎಕಾನಾಮಿಕ್‌ ಟೈಮ್ಸ್‌ ಪತ್ರಿಕೆ.
1966ರ ಜನವರಿ 24ರಂದು ಪತನಗೊಂಡಿದ್ದ ಭಾರತದ ಏರ್‌ ಇಂಡಿಯಾ ವಿಮಾನದಲ್ಲಿದ್ದ ಇವೆರಡು ಪತ್ರಿಕೆಗಳ ಅನೇಕ ಪ್ರತಿಗಳು ಇದ್ದವು. ಈ ಪತ್ರಿಕೆಗಳು ಇದೀಗ ಇದೇ ಪರ್ವತದಲ್ಲಿ ರೆಸಾರ್ಟ್‌ವೊಂದರ ಮಾಲಿಕ ಟಿಮೋತ್‌ ಮೊಟ್ಟಿನ್‌ ಅವರಿಗೆ ಸಿಕ್ಕಿವೆ.
ದಿನಪತ್ರಿಕೆಗಳು ಉತ್ತಮ ಸ್ಥಿತಿಯಲ್ಲಿದ್ದು, ಈಗಲೂ ಓದಲು ಯೋಗ್ಯವಾಗಿವೆ ಎಂದು ಮೊಟ್ಟಿನ್‌ ಅವರು ತಿಳಿಸಿದ್ದಾರೆ.
ವಿಮಾನದ ನಿಯಂತ್ರಣದ ಸಂವಹನದ ಕೊರತೆಯಿಂದಾಗಿ ಏರ್‌ ಇಂಡಿಯಾದ ಬೋಯಿಂಗ್‌ 707 ವಿಮಾನವು ಪತನಗೊಂಡಿತ್ತು. ಅದೇ ರೀತಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಕಟ್ಟಡದ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ವಿವಾದ ಕೆಲ ವರ್ಷಗಳಿಂದ ಗಾಂಧಿ ಪರಿವಾರದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಈ ಪ್ರಕರಣವಿನ್ನೂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಪತ್ರಿಕೆ ನಡೆಸಲು ಸರ್ಕಾರದಿಂದ ಮಂಜೂರಾಗಿದ್ದ ಕಟ್ಟಡವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಇದಾಗಿದೆ.
ಬೈಕ್‌ ಸ್ಟಂಟ್‌ಗೆ ವಿರೋಧ- ಬಾಲಕರಿಂದ ಬರ್ಬರ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
