ತೂತುಕುಡಿ:ಭಾರತೀಯ ವಾಯುಸೇನೆಯ ಮಾಜಿ ಸಿಬ್ಬಂದಿ ಪಿ ದುರೈ ಪಾಂಡಿಯನ್ಸ್ (ಪಿ.ಡಿ. ಪಾಂಡಿಯನ್) ಅವರ 100 ನೇ ಹುಟ್ಟುಹಬ್ಬವನ್ನು ಅರುಮುಗನೇರಿಯಲ್ಲಿ ಸೋಮವಾರ ಆಚರಿಸಲಾಯಿತು. ಜಗತ್ತಿನಾದ್ಯಂತ ವಿವಿಧ ಭಾಗಗಳಿಂದ ಬಂದ ರಕ್ಷಣಾ ಸಿಬ್ಬಂದಿ ಮತ್ತು ಹಿತೈಷಿಗಳು ಭಾರತದ ಹಿರಿಯ ಜೀವಂತ ವಾಯುಪಡೆಯ ಸಿಬ್ಬಂದಿಗೆ ಶುಭ ಹಾರೈಸಿದರು.
ಇದನ್ನೂ ಓದಿ:ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್​ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣು
ಪಾಂಡಿಯನ್ 1944 ರಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ (ಆರ್ಐಎಎಫ್) ಗೆ ಏರ್​​ಕ್ರಾಫ್ಟ್ ಮ್ಯಾನ್ ಆಗಿ ಸೇರಿಕೊಂಡು 1975 ರಲ್ಲಿ ತಮ್ಮ 55 ನೇ ವಯಸ್ಸಿನಲ್ಲಿ ಗ್ರೌಂಡ್ ಟ್ರೇನಿಂಗ್ ಬೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಆರ್​ಐಎಎಫ್​​ಗೆ ಸೇರುವ ಮುನ್ನ ಅವರು ಶಾಲೆಯೊಂದರಲ್ಲಿ ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ:ಜಾತಿಯ ವಿಷಬೀಜಕ್ಕೆ ಬಲಿಯಾದ ಪ್ರೇಮಿ: ಥಳಿಸಿ ಕೊಂದ ಗ್ರಾಮಸ್ಥರು!
31 ವರ್ಷಗಳ ಸೇವೆಯಲ್ಲಿ, ಪಾಂಡಿಯನ್ ಸಾವಿರಾರು ಏರ್​​ಕ್ರಾಫ್ಟ್​​​ಮನ್​​​ಗಳಿಗೆ ತರಬೇತಿ ನೀಡಿದ್ದರು ಮತ್ತು ಸ್ವತಃ ಸಮರ್ಥ ಕ್ರೀಡಾಪಟುವಾಗಿದ್ದರು. ಅವರು ಸದರ್ನ್ ಕಮಾಂಡ್ ವಾಲಿಬಾಲ್ ತಂಡದ ನಾಯಕತ್ವ ವಹಿಸಿದ್ದರು ಮತ್ತು ವಿಜಯವಾಡ ಸದರ್ನ್ ರೈಲ್ವೆ ಇನ್ಸ್ಟಿಟ್ಯೂಟ್ ವಾಲಿಬಾಲ್ ತಂಡದ ತರಬೇತುದಾರರಾಗಿದ್ದರು. ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ನಿರ್ದೇಶನಾಲಯದ ಸಂಪರ್ಕಕ್ಕೆ ಬಂದಾಗ 1963-64ರಲ್ಲಿ ಎನ್‌ಸಿಸಿ ಪಠ್ಯಕ್ರಮವನ್ನು ಮೂರು ವರ್ಷದಿಂದ ಎರಡು ವರ್ಷಕ್ಕೆ ಕಡಿಮೆಗೊಳಿಸಲು ಸಹ ಅವರು ಕೆಲಸ ಮಾಡಿದರು.
ಇದನ್ನೂ ಓದಿ:ರೋಗಿ ಸಾವು: ಹಿಂಸೆಯ ಕೇಂದ್ರವಾದ ಆಸ್ಪತ್ರೆ- ರಕ್ಷಣೆಗಾಗಿ ವೈದ್ಯರ ಭಾರಿ ಪ್ರತಿಭಟನೆ
101 ಕ್ಕೆ ಕಾಲಿಡುತ್ತಿರುವುದು ಅವರಿಗೇನು ಹೊಸ ದಿನದ ವಿಶೇಷತೆ ಎನಿಸುತ್ತಿಲ್ಲವಂತೆ. ಏಕೆಂದರೆ ಅವರು ಸದೃಢ ದೈಹಿಕ, ಮಾನಸಿಕ ಆರೋಗ್ಯ, ನೈರ್ಮಲ್ಯವನ್ನು ಕಾಪಾಡಿಕೊಂಡಿದ್ದಾರೆ. ದಿನಪತ್ರಿಕೆ ಓದುವುದು ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ದೈನಂದಿನ ವ್ಯಾಯಾಮ ಮಾಡುವ ಮೂಲಕ ಅವರ ದಿನದ ಆರಂಭವಾಗುತ್ತದೆ.
ಇದನ್ನೂ ಓದಿ:ಪೂರ್ವಜ ಇಲ್ಯಾಕೆ ಬಂದಿದ್ದ ಗೊತ್ತಾ? ಕೇಳಿದರೆ ಅಯ್ಯೋ ಪಾಪ ಅನ್ಸುತ್ತೆ
ಹತ್ತು ವರ್ಷಗಳ ಹಿಂದೆ ಚಿಕೂನ್‌ಗುನ್ಯಾದಿಂದ ಅವರು ಬಳಲದಿದ್ದರೆ, ಅವರು ಈಗಲೂ ಕ್ರೀಯಾಶೀಲ ಕ್ರೀಡಾಪಟುವಾಗಿರುತ್ತಿದ್ದರು ಎನ್ನುತ್ತಾರೆ ಅವರ ಪುತ್ರ ಜಾಕೋಬ್. ಚಿಕೂನ್‌ಗುನ್ಯಾದಿಂದ ಅವರ ಬಲಗಾಲಿಗೆ ತೊಂದರೆಯಾಗಿದೆಯಂತೆ.
ಇದನ್ನೂ ಓದಿ:20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?
ತಮ್ಮ ಸೇನೇಯಲ್ಲಿನ ಸೇವಾವಧಿಯ ಅನುಭವಗಳನ್ನು ಹಂಚಿಕೊಂಡ ಪಾಂಡಿಯನ್, 1971 ರಲ್ಲಿ ನಡೆದ ಇಂಡೋ-ಪಾಕಿಸ್ತಾನ ಯುದ್ಧದ ಘಟನೆಯನ್ನು ನೆನಪಿಸಿಕೊಂಡರು.
ಇದನ್ನೂ ಓದಿ:ಆನ್​ಲೈನ್​ನಲ್ಲಿ ಕೆಮಿಸ್ಟ್ರಿ ಕಲಿಸೋಕೆ ಶಿಕ್ಷಕಿಯ ಸರ್ಕಸ್​…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eighteen =
Remember me
