ಬೆಂಗಳೂರು:ವೈಕುಂಠ ಏಕಾದಶಿಯಂದು ತಿರುಮಲ ತಿರುಪತಿ ದರ್ಶನಕ್ಕಾಗಿ ಟಿಟಿಡಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ, 21 ನಿಮಿಷಗಳಲ್ಲಿ ಎಲ್ಲವೂ ಖಾಲಿಯಾಗುವ ಮೂಲಕವಾಗಿ ದಾಖಲೆ ಬರೆದಿದೆ. ಶ್ರೀವಾರಿ ವೈಕುಂಠದ ಮೂಲಕ ದರ್ಶನ ಟಿಕೆಟ್ ಖರೀದಿಸಲು ಭಕ್ತರು ಪೈಪೋಟಿ ನಡೆಸಿದ್ದು ಕಂಡುಬಂದಿದೆ.

ಡಿ.23ರ ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪ ದರ್ಶನದ 2.25 ಲಕ್ಷ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಟಿಟಿಡಿ ನೀಡಿದ 300 ರೂಪಾಯಿಯ ಎಸ್‌ಇಡಿ ಟಿಕೆಟ್‌ಗಳಿಗೆ ನ.10ರಂದು ಟಿಕೆಟ್‌ ಮಾರಾಟ ಆರಂಭವಾದ ಕೇವಲ 20 ನಿಮಿಷದಲ್ಲಿ ಮಾರಾಟವಾಗಿದ್ದು, ಭಕ್ತರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭರ್ಜರಿ 6.75 ಕೋಟಿ ರು. ಆದಾಯ ಹರಿದು ಬಂದಿದೆ. ತಿಮ್ಮಪ್ಪನ ಸನ್ನಿಧಾನದಲ್ಲಿ ಜರುಗುವ ವೈಕುಂಠ ಎಕಾದಶಿ ಮಹೋತ್ಸವದ ಪ್ರಯುಕ್ತ ವೈಕುಂಠ ದ್ವಾರ ವಿಶೇಷ ದರ್ಶನದ ವಿಶೇಷ ಟಿಕೆಟ್‌ಗಳನ್ನು ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ನೀಡುತ್ತಿದೆ.
ಶುಕ್ರವಾರ 11 ಗಂಟೆಗೆ ಆನ್‌ಲೈನ್‌ನಲ್ಲಿ 300 ರು. ಮುಖಬೆಲೆಯ ಟಿಕೆಟ್‌ ಮಾರಾಟ ಆರಂಭವಾಗಿತ್ತು. ಇದಾದ 20 ನಿಮಿಷದಲ್ಲಿ 2.25 ಲಕ್ಷ ಟಿಕೆಟ್‌ ಮಾರಾಟವಾಗಿ ಟಿಟಿಡಿಗೆ ಬರೋಬ್ಬರಿ 6.75 ಕೋಟಿ ರು. ಆದಾಯ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಮಿತಿಯು ಶ್ರೀವಾಣಿಯ ದರ್ಶನ ಹಾಗೂ ಕಾಣಿಕೆಯ ಟಿಕೆಟ್‌ಗಳನ್ನು ಜಂಟಿಯಾಗಿ ಆರಂಭಿಸಿದ್ದರಿಂದ ಭಕ್ತಾದಿಗಳು ಕೆಲಕಾಲ ಗೊಂದಲಕ್ಕೊಳಗಾಗಿದ್ದರು. ನಂತರ ಟಿಟಿಡಿಯು ಅದನ್ನು ಸ್ಥಗಿತಗೊಳಿಸಿ ಡಿ.22ರಂದು ತಿರುಪತಿಯಲ್ಲೇ ಟಿಕೆಟ್‌ ಮಾರಾಟ ಮಾಡುವುದಾಗಿ ಸ್ಪಷ್ಟನೆ ನೀಡಿತು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × two =
Remember me
