ಮುಂಬೈ:ಕಳೆದ ಕೆಲವು ತಿಂಗಳುಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಿದ ಕಂಪನಿಗಳಲ್ಲಿ ನಾಪ್​ಬುಕ್ಸ್​ ಲಿಮಿಟೆಡ್​ (Naapbooks Ltd) ಒಂದಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಕೇವಲ 3 ತಿಂಗಳಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈಗ ಕಂಪನಿಯು 2 ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿರುವುದರಿಂದ ಷೇರುಗಳಿಗೆ ಬೇಡಿಕೆ ಮುಂದುವರಿದಿದೆ.
ಈ ಕಂಪನಿಯು 1 ಷೇರಿನ ಮೇಲೆ 2 ಬೋನಸ್ ಷೇರುಗಳನ್ನು ನೀಡುತ್ತಿದ್ದು, 10 ರೂ ಮುಖಬೆಲೆಯ 1 ಷೇರಿನ ಮೇಲೆ 2 ಬೋನಸ್ ಷೇರುಗಳನ್ನು ನೀಡಲಾಗುವುದು ಎಂದು ಷೇರು ಮಾರುಕಟ್ಟೆಗಳಿಗೆ ನೀಡಿರುವ ಮಾಹಿತಿಯಲ್ಲಿ ಕಂಪನಿ ತಿಳಿಸಿದೆ. ಈ ಬೋನಸ್ ವಿತರಣೆಯ ದಾಖಲೆ ದಿನಾಂಕವನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಆದರೂ, ಬೋನಸ್ ವಿತರಣೆಯನ್ನು ಘೋಷಿಸಿದ 2 ತಿಂಗಳೊಳಗೆ ಅರ್ಹ ಹೂಡಿಕೆದಾರರಿಗೆ ಜಮಾ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಮುಂದಿನ ದಿನಗಳಲ್ಲಿ ದಾಖಲೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.
ಗುರುವಾರ ಕಂಪನಿಯ ಷೇರುಗಳ ಬೆಲೆ ಶೇಕಡಾ 5 ರಷ್ಟು ಹೆಚ್ಚಳವಾಗಿ, ಅಪ್ಪರ್​ ಸರ್ಕ್ಯೂಟ್ ಹಿಟ್ ಆದವು. ಈಗ ಕಂಪನಿಯ ಷೇರುಗಳ ಬೆಲೆ 240.45 ರೂ. ಮುಟ್ಟಿದೆ. ಇದು ಕಂಪನಿಯ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರು ಬೆಲೆಗಳು ಶೇ. 39ರಷ್ಟು ಏರಿಕೆ ಕಂಡಿವೆ. 3 ತಿಂಗಳಲ್ಲಿ ಶೇಕಡಾ 122.30 ರಷ್ಟು ಹೆಚ್ಚಳವಾಗಿವೆ. ಈ ಬೋನಸ್ ಷೇರುಗಳನ್ನು ವಿತರಿಸುವ ಕಂಪನಿಯ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 212 ಪ್ರತಿಶತದಷ್ಟು ಹೆಚ್ಚಾಗಿದೆ.
ಈ ಐಪಿಒದಲ್ಲಿ ಸ್ಟಾಕ್​ ಖರೀದಿಸಿದರೆ ಲಾಭ ಖಚಿತ: 75ರ ಷೇರು ಗ್ರೇ ಮಾರುಕಟ್ಟೆಯಲ್ಲಿ 163 ರೂಪಾಯಿಗೆ ವಹಿವಾಟು

ಒಂದೇ ವರ್ಷದಲ್ಲಿ 1 ಲಕ್ಷವಾಯ್ತು 32 ಲಕ್ಷ: ಈಗ ಒಂದು ಷೇರಿಗೆ ಆರು ಬೋನಸ್​ ಸ್ಟಾಕ್​ ನೀಡಲಿದೆ ಕಂಪನಿ

ಟಾಟಾ ಪವರ್​ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ: ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + thirteen =
Remember me
