ನವದೆಹಲಿ:ದೇಶ ಕಾಯುವ ಯೋಧರಿಗೂ ಮಹಾಮಾರಿಯಂತೆ ಕಾಡುತ್ತಿದೆ ಈ ಕೊವಿಡ್​-19.ಗಡಿ ಭದ್ರತಾ ಪಡೆ (ಬಿಎಸ್​ಎಫ್​)ಯ ಇಬ್ಬರು ಯೋಧರು ಕರೊನಾದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ಓರ್ವ ಯೋಧ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಇನ್ನೋರ್ವ ಬಿಎಸ್​ಎಫ್​ ಯೋಧನ ಸಾವಾಗಿದೆ.
ಕಳೆದ ತಿಂಗಳು ಸಿಆರ್​ಪಿಎಫ್​ನ 55 ವರ್ಷದ ಸಬ್​ ಇನ್ಸ್​ಪೆಕ್ಟರ್​ ಕೊವಿಡ್​ನಿಂದ ಸಾವನ್ನಪ್ಪಿದ್ದರು. ಈಗ ಇವರಿಬ್ಬರು ಮೃತಪಟ್ಟಿದ್ದು, ಸೇನಾ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ಸುಮಾರು 2.5 ಲಕ್ಷ ಸಿಬ್ಬಂದಿಯಿರುವ ಗಡಿ ಭದ್ರತಾ ಪಡೆಯಲ್ಲಿ 193 ಕರೊನಾ ಸೋಂಕಿತರು ಇದ್ದಾರೆ. ಇಂದು 41 ಹೊಸ ಕೇಸ್​ಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯಿಂದ ವಿಧಿಸಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ವ್ಯವಸ್ಥಿತವಾದ ಐಸೋಲೇಶನ್​ ವಾರ್ಡ್​ಗಳು, ಕ್ವಾರಂಟೈನ್​ ಸೆಂಟರ್​ಗಳನ್ನೂ ನಿರ್ಮಿಸಲಾಗಿದೆ ಎಂದು ಬಿಎಸ್​ಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸೇನಾನಿಗಳ ತ್ಯಾಗ ಶ್ಲಾಘನೀಯ
ಬುಧವಾರ ಒಂದೇ ದಿನ 85 ಬಿಎಸ್​ಎಫ್​ ಯೋಧರಲ್ಲಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅದರಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದ್ದು, ದೆಹಲಿ, ಕೋಲ್ಕತ್ತಾ, ತ್ರಿಪುರದಿಂದ ಎಂದು ಬಿಎಸ್​ಎಫ್​ ವಕ್ತಾರ ಶುಭೇಂದು ಭಾರದ್ವಾಜ್​ ತಿಳಿಸಿದ್ದಾರೆ.
ಕೇಂದ್ರ ಪ್ಯಾರಾಮಿಲಿಟರಿ ಪಡೆಗಳ ಒಟ್ಟು 400 ಸೈನಿಕರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ರಾಷ್ಟ್ರಾದ್ಯಂತ ಹಲವು ಯೋಧರು ಲಾಕ್​ಡೌನ್​ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅವರ ಆರೋಗ್ಯವೂ ಅಪಾಯದಲ್ಲೇ ಇದೆ. (ಏಜೆನ್ಸೀಸ್​)
ಇದನ್ನೂ ಓದಿ:ಓಖಾದ ಕಡಲ ಗಡಿರೇಖೆ ಬಳಿ ಭಾರತದ ಎರಡು ಬೋಟ್​ಗಳ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್​ ನೌಕಾಪಡೆ ಸೈನಿಕರು
ಉಗ್ರ ರಿಯಾಜ್​ ನಾಯ್ಕೂ ಎನ್​ಕೌಂಟರ್​ಗೆ ರಕ್ಷಣಾ ಪಡೆಗಳ ಸಹಾಯಕ್ಕೆ ನಿಂತಿದ್ದು ಇನ್ನೊಂದು ಉಗ್ರಸಂಘಟನೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
