ಭೋಪಾಲ್​:ಎರಡು ಗೂಡ್ಸ್​ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಿಲುಕಿರುವ ಘಟನೆ ಮಧ್ಯಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ರೈಲುಗಳೆರಡು ನ್ಯಾಷನಲ್​ ಥರ್ಮಲ್​ ಪವರ್​ ಕಾರ್ಪೋರೇಷನ್​(ಎನ್​ಟಿಪಿಸಿ)ಗೆ ಸಂಬಂಧಿಸಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಮುಖಾಮುಖಿಯಾಗಿ ಡಿಕ್ಕಿಯಾಗಿವೆ.
ಒಂದು ರೈಲು ಕಲ್ಲಿದ್ದಲು ತುಂಬಿಕೊಂಡು ಉತ್ತರ ಪ್ರದೇಶದ ರಿಹಾದ್​ ನಗರದಲ್ಲಿರುವ ನ್ಯಾಷನಲ್​ ಥರ್ಮಲ್​ ಪವರ್ ಪ್ಲ್ಯಾಂಟ್​ಗೆ ತೆರಳುತ್ತಿತ್ತು. ಇನ್ನೊಂದು ರೈಲು ಕಲ್ಲಿದ್ದಲನ್ನು ಖಾಲಿ ಮಾಡಿಕೊಂಡು ಹಿಂದಿರುಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ.​ ಅಪಘಾತದ ರಭಸಕ್ಕೆ ಬೋಗಿಗಳು ಕೂಡ ಟ್ರ್ಯಾಕ್​ನಿಂದ ಹೊರಕ್ಕೆ ಉರುಳಿ ಬಿದ್ದಿವೆ.
ಅಪಘಾತ ಸಂಭವಿಸುತ್ತಿದ್ದಂತೆ ಅನೇಕ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಎನ್​ಟಿಪಿಸಿ ಅಧಿಕಾರಿಗಳು ಕೂಡ ಪರಿಸ್ಥಿತಿಯ ನಿರ್ವಹಣೆ ಮಾಡುತ್ತಿದ್ದು, ಸ್ಥಳದಲ್ಲಿ ಭಾರಿ ಜನಸ್ತೋಮವೇ ನೆರೆದಿದೆ. ಸ್ಥಳದಲ್ಲಿ ಪೊಲೀಸ್​ ಸಿಬ್ಬಂದಿ, ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ಮತ್ತು ಜಿಲ್ಲಾಡಳಿತ ಬೀಡುಬಿಟ್ಟಿದೆ.
ಆಕಸ್ಮಿಕವಾಗಿ ಒಂದೇ ಟ್ರ್ಯಾಕ್​ನಲ್ಲಿ ಪ್ರಯಾಣ ಮಾಡಲು ಅನುಮತಿ ನೀಡಿದ್ದಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಅವಶೇಷಗಳಡಿ ಸಿಲುಕಿರುವವರನ್ನು ಹೊರ ತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + four =
Remember me
