ನ್ಯೂಯಾರ್ಕ್:ಬೆಲ್ಜಿಯಂನ ಬೆಕ್ಕು, ಚೀನದ ನಾಯಿ ಮತ್ತು ಅಮೆರಿಕದ ಹುಲಿಗೆ ಕರೊನಾ ಸೋಂಕು ತಗುಲಿರುವ ಬಗ್ಗೆ ಈಗಾಗಲೇ ವರದಿಯಾಗಿರುವ ಬೆನ್ನಲ್ಲೇ, ಅಮೆರಿಕದಲ್ಲಿ ಇನ್ನೆರಡು ಸಾಕು ಬೆಕ್ಕುಗಳಲ್ಲಿ ಈ ಸೋಂಕು ಪತ್ತೆಯಾಗಿದೆ.ಪ್ರಾಣಿಗಳಲ್ಲಿ ಕಾಣಿಸಿಕೊಂಡಿರುವ ಕರೊನಾ ಸೋಂಕಿನ ಬಗ್ಗೆ ಈಗಾಗಲೇ ಎಲ್ಲೆಡೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿದ್ದು, ಸೋಂಕು ಪ್ರಾಣಿಗಳ ದೇಹವನ್ನು ಹೇಗೆ ಪ್ರವೇಶಿಸಿದವು ಎಂಬ ಬಗ್ಗೆ ನಾನಾ ರೀತಿಯ ವರದಿಗಳು ಬಂದಿದ್ದು, ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ನಡುವೆಯೇ ಈಗ ಬೆಕ್ಕಿನಲ್ಲಿ ವೈರಸ್‌ ಇರುವುದು ದೃಢಪಟ್ಟಿದೆ. ನ್ಯೂಯಾರ್ಕ್‌ನ ಮನೆಯೊಂದರ ಎರಡು ಸಾಕು ಬೆಕ್ಕುಗಳಲ್ಲಿ ಇದು ಕಂಡುಬಂದಿದೆ.ಈಗಾಗಲೇ ಕರೊನಾ ಸೋಂಕಿತರು ಹಾಗೂ ದಿನದಿಂದ ದಿನಕ್ಕೆ ಏರುತ್ತಿರುವ ಮೃತರ ಸಂಖ್ಯೆಯಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಈಚೆಗಷ್ಟೇ ಹುಲಿಯಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆದರೀಗ ಮನೆಯಲ್ಲಿರುವ ಬೆಕ್ಕಿಗೇ ಕಾಣಿಸಿಕೊಂಡಿದ್ದು ಮತ್ತಷ್ಟು ಭಯವನ್ನು ಹುಟ್ಟಿಸಿದೆ. ವಿಶ್ವದಲ್ಲೇ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಕುಖ್ಯಾತಿ ಗಳಿಸಿರುವ ಅಮೆರಿಕಕ್ಕೀಗ ಇನ್ನೊಂದು ತಲೆನೋವು ಶುರುವಾಗಿದೆ.ಈ ಬೆಕ್ಕುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಆಗ ಕರೊನಾ ಸೋಂಕು ಇರಬಹುದೇ ಎಂಬ ಸಂದೇಹದಿಂದ ಮಾಲೀಕರು ಅದರ ಪರೀಕ್ಷೆ ಮಾಡಿಸಿದ್ದರು. ಆಗ ಸೋಂಕು ಇರುವುದು ಖಚಿತವಾಗಿದೆ. ಸೋಂಕು ಬಾಧಿತರೊಂದಿಗಿನ ಸಂಪರ್ಕದಿಂದಾಗಿ ಬೆಕ್ಕಿಗೂ ಇದು ತಗುಲಿರಬಹುದು ಎಂದು ಪ್ರಾಥಮಿಕ ವರದಿ ಹೇಳಿದೆ.ಈ ಹಿಂದೆ ಬೆಲ್ಜಿಯಂನ ಬ್ರುಸೇಲ್ಸ್‌ನಲ್ಲಿಯೂ ಬೆಕ್ಕಿಗೆ ಸೋಂಕು ಕಾಣಿಸಿಕೊಂಡಿತ್ತು. ಹಾಂಗಕಾಂಗ್‌ನಲ್ಲಿ ಎರಡು ನಾಯಿಗಳಿಗೆ ಸೋಂಕು ದೃಢಪಟ್ಟಿದ್ದವು. ಈ ಪ್ರಾಣಿಗಳ ಮಾಲೀಕರು ಸೋಂಕು ಪೀಡಿತನಾಗಿದ್ದರಿಂದ ಸೋಂಕು ಹರಡಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದರು.ಸಾಕುಪ್ರಾಣಿಗಳಿಗೆ ಸೋಂಕು ತಗುಲುವಿಕೆ ಪ್ರಕರಣಗಳು ಅಪರೂಪ. ಒಂದು ವೇಳೆ ಅದಕ್ಕೆ ಬಂದರೂ ಸಾಕುಪ್ರಾಣಿಗಳಿಂದ ಮನುಷ್ಯರಿಗೆ ಮಾರಕ ರೋಗ ತಗುಲುವುದಿಲ್ಲ. ಬದಲಿಗೆ ಮನುಷ್ಯರಿಂದಲೇ ಪ್ರಾಣಿಗಳಿಗೆ ಸೋಂಕು ಹರಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. “ಪ್ರಾಣಿಗಳು ಮತ್ತು ಸೋಂಕಿತ ಮಾನವರ ನಡುವಿನ ನಿಕಟ ಸಂಪರ್ಕದಿಂದ ಪ್ರಾಣಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಆಧ್ದರಿಂದ ಸಾಕುಪ್ರಾಣಿಗಳೊಂದಿಗೆ ವ್ಯವಹರಿಸುವಾಗ ನೈರ್ಮಲ್ಯದ ಪ್ರಮಾಣಿತ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಪ್ರಾಣಿ ಅನೇಕ ಕಡೆಗಳಲ್ಲಿ ಓಡಾಡುವ ಕಾರಣ, ಅದನ್ನು ಮುಟ್ಟಿದ ತಕ್ಷಣ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು. ಪ್ರಾಣಿ ನಿಮ್ಮ ಮುಖವನ್ನು ನೆಕ್ಕಲು ಬಿಡಬೇಡಿ ಎಂದು ವೈದ್ಯರು ಎಚ್ಚರಿಸಿದ್ದಾರೆ.(ಏಜೆನ್ಸೀಸ್‌)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nine =
Remember me
