ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ರ ಒಟ್ಟು ಆಸ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಎರಡು ಹಸುಗಳು ಮತ್ತು ಒಂದು ಕರು ಮಾತ್ರ ಹೆಚ್ಚಳವಾಗಿವೆ! ಬಿಹಾರ ಸಿಎಂ ಹಾಗೂ ಅಲ್ಲಿನ ಸಚಿವರ ಆಸ್ತಿ ಮಾಹಿತಿಯನ್ನು ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು, ಅನೇಕ ಕುತೂಹಲಕರ ಮಾಹಿತಿಗಳು ಬೆಳಕಿಗೆ ಬಂದಿದೆ.
ಸತತ ಐದನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್, 2010ರಲ್ಲಿ ಪ್ರತಿ ವರ್ಷ ಸರ್ಕಾರದ ಹಾಗೂ ಸಂಪುಟ ಸಚಿವರ ಸಾಧನೆಗಳ ವರದಿ ಬಿಡುಗಡೆ ಮಾಡುವ ಯೋಜನೆ ಪ್ರಾರಂಭಿಸಿದ್ದರು. ಇದರಲ್ಲಿ ಸಂಪುಟ ಸಚಿವರ ಆಸ್ತಿ ವರದಿಯೂ ಸೇರಿದೆ.
ಕಳೆದ ಒಂದು ವರ್ಷದಲ್ಲಿ ನಿತೀಶ್​ಕುಮಾರ್​ರ ಆಸ್ತಿಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕಳೆದ ವರ್ಷ ನಿತೀಶ್​ರ ಬಳಿ 8 ಹಸು ಹಾಗೂ 6 ಕರುಗಳಿದ್ದವು. ಈಗ 10 ಹಸುಗಳು ಹಾಗೂ 7 ಕರುಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷ ನಿತೀಶ್ ಬಳಿ 42 ಸಾವಿರ ರೂಪಾಯಿ ನಗದು ಇತ್ತು. ಈ ವರ್ಷ ಅದರ ಪ್ರಮಾಣ 38,039ಕ್ಕೆ ಇಳಿದಿದೆ. ನಿತೀಶ್ ಒಟ್ಟು 16 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, 40 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಿತೀಶ್​ರ ಪುತ್ರ ತಾಯಿಯ ಆಸ್ತಿ ಪಡೆದಿದ್ದು, 1.39 ಕೋಟಿ ರೂ. ಚರಾಸ್ತಿ ಹಾಗೂ 1.48 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿಯ ಒಟ್ಟು ಆಸ್ತಿ 1.26 ಕೋಟಿ ರೂ. ಆಗಿದ್ದು, ಅವರ ಪತ್ನಿ 1.65 ಕೋಟಿ ಆಸ್ತಿ ಹೊಂದಿದ್ದಾರೆ. ಇದರ ಜತೆಗೆ ಬ್ಯಾಂಕ್ ಖಾತೆಯಲ್ಲಿ 81.54 ಲಕ್ಷ ರೂ. ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಯಲ್ಲಿ 97.18 ಲಕ್ಷ ರೂ. ಇದೆ. ನಿತೀಶ್ ಕುಮಾರ್​ರ ಸಂಪುಟ ಸಚಿವರಲ್ಲಿ ಬಹುತೇಕ ಎಲ್ಲರ ಆಸ್ತಿಗಳಲ್ಲೂ ಏರಿಕೆ ಕಂಡುಬಂದಿದೆ. ಸಚಿವ ಸುರೇಶ್ ಶರ್ಮಾ 9 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ನೀರಜ್ ಕುಮಾರ್ ಅತೀ ಕಡಿಮೆ ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ. ಅವರು ಒಟ್ಟು 35.87 ಲಕ್ಷ ರೂ. ಆಸ್ತಿ ಹೊಂದುವುದರ ಜತೆಗೆ 27 ಲಕ್ಷ ರೂ. ಸಾಲವನ್ನೂ ಹೊಂದಿದ್ದಾರೆ. ಕಳೆದ ವರ್ಷ ನಿತೀಶ್ ಕುಮಾರ್ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಸಂಜಯ್ ಝಾ ತಮ್ಮ ಪತ್ನಿಯ ಆಸ್ತಿ ಸೇರಿ ಒಟ್ಟು 22 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ದೆಹಲಿಯ ಮಾಲ್​ವೊಂದರಲ್ಲಿ ಸಂಜಯ್ ಎರಡು ಅಂಗಡಿಗಳನ್ನು ಹೊಂದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 6 =
Remember me
