ತಿರುವನಂತಪುರಂ:ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಕಸ್ಟಮ್ಸ್ ಅಧಿಕಾರಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ. ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಘಟಕದ ಅಧಿಕಾರಿಗಳಾದ ಅನೀಶ್ ಮುಹಮ್ಮದ್ ಮತ್ತು ನಿತಿನ್ ಎಂಬ ಅಧಿಕಾರಿಗಳು ಪ್ರಸ್ತುತ ಡಿಆರ್‌ಐ ವಶದಲ್ಲಿದ್ದಾರೆ.
ವಿಮಾನ ನಿಲ್ದಾಣದ ಮೂಲಕ ಸುಮಾರು 80 ಕೆಜಿ ಚಿನ್ನವನ್ನು ಸಾಗಿಸಲು ಇವರಿಬ್ಬರು ಕಳ್ಳಸಾಗಣೆ ದಂಧೆಗೆ ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ದೇವರಿಗೆ ಚಿನ್ನದ ಸೀರೆ ಉಡುಗೊರೆ ಕೊಟ್ಟ ಭಕ್ತರು: ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ!
ಇತ್ತೀಚೆಗೆ ನಡೆದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಇವರಿಬ್ಬರೂ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಡಿಆರ್‌ಐ ಇಬ್ಬರನ್ನು ಬಂಧಿಸಿತ್ತು. ಕೆಲ ದಿನಗಳ ಹಿಂದೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಅಕ್ರಮವಾಗಿ ಸಾಗಿಸಲಾಗಿದ್ದ 4.8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಕಸ್ಟಮ್ಸ್ ಲಗೇಜ್ ಅನ್ನು ತೆರವುಗೊಳಿಸಿದ್ದರೂ ಡಿಆರ್​ಐ, ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ:ಮದುವೆಯಾದ ವಾರದೊಳಗೆ ಚಿನ್ನಾಭರಣದೊಂದಿಗೆ ವಧು ಎಸ್ಕೇಪ್​; ವರ್ಷದ ಬಳಿಕ ಓರ್ವ ಆರೋಪಿ ಅರೆಸ್ಟ್​
ಇದರ ಬೆನ್ನಲ್ಲೇ ಚಿನ್ನಾಭರಣ ದಂಧೆಕೋರರು ಕಸ್ಟಮ್ಸ್ ಕಚೇರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಅವರು ಅನೀಶ್ ಮತ್ತು ನಿತಿನ್ ಜೊತೆಗಿನ ಫೋನ್ ಸಂಭಾಷಣೆಯನ್ನೂ ಸೋರಿಕೆ ಮಾಡಿದರು.
ತದನಂತರ ಡಿಆರ್‌ಐ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈವಾಡವನ್ನು ದೃಢಪಡಿಸಿ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಡಿಆರ್‌ಐ ತನಿಖಾ ತಂಡ ಇಬ್ಬರ ವಿಚಾರಣೆ ನಡೆಸುತ್ತಿದೆ. ಇನ್ನಿಬ್ಬರು ಅಧಿಕಾರಿಗಳ ಬಂಧನವನ್ನು ಶೀಘ್ರವೇ ದಾಖಲಿಸಲಾಗುವುದು ಎಂದು ಕೇರಳದ ಸುದ್ದಿ ಸಂಸ್ಥೆ ವರದಿ ಮಾಡಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 2 =
Remember me
